ಅಡಿಲೆಡ್: ಆಸ್ಟ್ರೇಲಿಯಾದ ಪಿಜ್ಜಾ ರೆಸ್ಟೋರೆಂಟ್ ಆವರಣದಲ್ಲಿ ಭಾರೀ ಗಾತ್ರದ ಮೃತ ಹಸುವಿನ ದೇಹವನ್ನು ನೇತು ಹಾಕಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇಟಿಕಾ ಹೆಸರಿನ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಸುವಿನ ಮಾಂಸ ಹಾಗೂ ಇತರೆ ಉತ್ಪನ್ನಗಳನ್ನು ಪೂರೈಸುತ್ತಿದೆ. ಈ ರೆಸ್ಟೋರೆಂಟ್ ಮಾಲೀಕರಾದ ಫೆಡೆರಿಕೊ ಮತ್ತು ಮೆಲಿಸಾ ಪಿಸಾನೆಲ್ಲಿ ನಾವು ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬಹಳ ಪ್ರಯತ್ನ ಪಟ್ಟಿದ್ದು, ಎಲ್ಲರಿಗೂ ತಾವು ಸೇವಿಸುವ ಮಾಂಸ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಈ ರೀತಿ ಮಾಡಿರುವುದಾಗಿ ತಮ್ಮನ್ನು ಸಮರ್ಥಿಸಿ ಕೊಂಡಿದ್ದಾರೆ.
Advertisement
Advertisement
Advertisement
ರೆಸ್ಟೋರೆಂಟ್ ಮಾಲೀಕರ ಕ್ರಮವನ್ನು ಹಲವರು ಟೀಕಿಸಿ ಇದೊಂದು ಅಮಾನವೀಯ ಘಟನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೈನುಗಾರಿಕೆಯ ಕೈಗಾರೀಕರಣದತ್ತ ಹೆಚ್ಚಿನ ಜನರನ್ನು ಸೆಳೆಯುವುದು, ಒಂದು ಉತ್ತಮ ಆರೋಗ್ಯಕರ ಉದ್ಯಮವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದು ಮೆಲಿಸಾ ಪಿಸಾನೆಲ್ಲಿ ತಿಳಿಸಿದ್ದಾರೆ. ಆದರೆ ರೆಸ್ಟೋರೆಂಟ್‍ನ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಹಲವಾರು ತಮ್ಮ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
Advertisement
ರೆಸ್ಟೋರೆಂಟ್‍ನ ಈ ಕ್ರಮವು ಅತ್ಯಂತ ಕ್ರೂರ ಹಾಗೂ ಅಜ್ಞಾನದಿಂದ ಕೂಡಿದೆ ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬರು ನಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ಕೇವಲ ಕೆಲವು ರೆಸ್ಟೋರೆಂಟ್‍ಗಳು ಮಾತ್ರ ತಾವು ಎಲ್ಲಿಂದ ಆಹಾರವನ್ನು ಪಡೆಯುತ್ತಿದ್ದೇವೆ ಎಂಬುದನ್ನು ತಿಳಿಸುತ್ತವೆ. ಮಾಂಸವು ಸೂಪರ್ ಮಾರ್ಕೆಟ್‍ನಿಂದ ಬರುತ್ತದೆ ಎಂಬ ಭಾವನೆಯನ್ನು ತೊರೆದು, ಅದರ ಹಿಂದಿನ ಪ್ರಾಣಿಗಳ ನೋವು ಹಾಗೂ ಸಂಕಟಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಿಮ್ಮ ರೆಸ್ಟೋರೆಂಟ್ ಸಸ್ಯಹಾರಿಯಾಗಿದ್ದಾರೆ ಇದು ಉತ್ತಮ ಅರ್ಥವನ್ನು ನೀಡುತ್ತದೆ, ಆದರೆ ನಿಮ್ಮದೇ ಕಾರಣಗಳಿಗಾಗಿ ಹಸುವನ್ನು ಇಂದು ಅಲಂಕಾರಿಕ ವಸ್ತುವಾಗಿ ಒಳಸುತ್ತಿದ್ದೀರ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ಈ ಪ್ರಯತ್ನಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದರಲ್ಲಿ ಕೆಲವರು ನಮಗೆ ಮೆಚ್ಚುಗೆಯನ್ನು ಸೂಚಿಸಿದರೆ, ಮತ್ತೆ ಕೆಲವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಪಿಸಾನೆಲ್ಲಿ ಹೇಳಿದ್ದಾರೆ.