ಹಾವೇರಿ: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷಗಳ ರಾಜಕೀಯ ನಾಯಕರು ವಾಕ್ಸಮರ ಮುಂದುವರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆರೋಪ ಮಾಡಿದ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Advertisement
ಹೌದು. ಇಂದು ಹಾನಗಲ್ ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಅವರು, ಹಾನಗಲ್‍ಗೆ ಗೋಣಿಚೀಲದಲ್ಲಿ ದುಡ್ಡು ತಂದಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ಈ ಕ್ಷೇತ್ರಕ್ಕೆ ಏನು ಕೊಟ್ಟಿದ್ದಾರೆ..?. ಯಾವುದೋ ಒಂದೆರಡು ರಸ್ತೆಗಳನ್ನ ಮಾಡಿದ್ದು ಬಿಟ್ಟರೆ ಏನೂ ಮಾಡಿಲ್ಲ. ಇಷ್ಟು ಮಾಡಿದ್ರೆ ಜನರ ಸಂಕಷ್ಟಗಳು ನಿವಾರಣೆ ಆಗುವುದಿಲ್ಲ. ಇಲ್ಲಿ ಬಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಅಭಿವೃದ್ಧಿ ಕೆಲಸದ ಬಗ್ಗೆ ಸವಾಲು ಹಾಕಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಸ್ ಓಡಿಸಿಕೊಂಡಿದ್ದವನನ್ನು ಕರ್ಕೊಂಡು ಬಂದು ಶಾಸಕ ಮಾಡಿದೆ -ಜಮೀರ್ ವಿರುದ್ಧ ಹೆಚ್‍ಡಿಕೆ ವಾಗ್ದಾಳಿ
Advertisement
Advertisement
ನಿಮಗೆ ಮನುಷ್ಯತ್ವ ಮತ್ತು ತಾಯಿ ಹೃದಯ ಇದೆಯಾ..? ಈಗ ಹಾನಗಲ್‍ನಲ್ಲಿ ಚೀಲದಲ್ಲಿ ಹಣ ತಂದಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಯಾರ ದುಡ್ಡು, ಸಾರ್ವಜನಿಕರ ದುಡ್ಡು. ಭ್ರಷ್ಟಾಚಾರ ಬಗ್ಗೆ ಚರ್ಚೆ ಮಾಡಿದ್ರೆ ನಿಮಗೆ ಏನು ಲಾಭ..? ನಮ್ಮ ಪಕ್ಷದ ಅಭ್ಯರ್ಥಿ ಪರ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಇಲ್ಲಿ ಏಕಾಂಗಿ ಆಗಿಲ್ಲ, ಈ ಕ್ಷೇತ್ರದಲ್ಲಿ ನಾವು ಮೂರು ತಿಂಗಳ ಹಿಂದೆಯೇ ಅಭ್ಯರ್ಥಿಯನ್ನ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ಸಿನಲ್ಲಿ ಯಂಕ, ನಾಣಿ, ಸೀನ ಅನ್ನೋ ಎಂಪಿಗಳಿದ್ದಾರೆ ಅಷ್ಟೇ: ಬಿಎಸ್‍ವೈ
Advertisement
ಗ್ರಾಮೀಣ ಮಟ್ಟದಲ್ಲಿ ಅಭ್ಯರ್ಥಿ ಪಕ್ಷ ಸಂಘಟನೆ ಮಾಡಿದ್ದಾರೆ. ನನ್ನ ಉದ್ದೇಶ ಈ ಉಪಚುನಾವಣೆಯಲ್ಲಿ ಗೆಲ್ಲುವುದಲ್ಲ. ನಾನು ಮಶಿನ್ 123 ಗುರಿ ಇಟ್ಟುಕೊಂಡಿದ್ದೇನೆ. 2023 ರ ಚುನಾವಣೆಯಲ್ಲಿ ಗೆಲ್ತೀವಿ. ನಮ್ಮ ಪಕ್ಷದಲ್ಲಿ ನಾಯಕರ ಕೊರತೆಯಿದೆ. ಮತ್ತೊಂದು ದಿನ ಹಾನಗಲ್ ನಲ್ಲಿ ಪ್ರಚಾರ ಮಾಡ್ತೀನಿ. ಈ ಚುನಾವಣೆಯಿಂದ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಹೋಗಬಹುದು. ನನ್ನ ಗುರಿ ಬೈ ಎಲೆಕ್ಸನ್ ಅಲ್ಲ, 2023. ಹಣದ ಚೀಲ ಹೇಗೆ ತರಬೇಕು ಎನ್ನುವ ಅನುಭವ ಎರಡು ಪಕ್ಷದವರಿಗೆ ಇರಬಹುದು ಎಂದು ವಾಗ್ದಾಳಿ ನಡೆಸಿದರು.