ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್

Public TV
2 Min Read
madhya pradesh

ಭೋಪಾಲ್: ವಾರದ ಆರಂಭದಲ್ಲಿ ಮಧ್ಯಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆಯಲ್ಲಿ ನಡೆದ ನಾಲ್ಕು ವರ್ಷದ ಬಾಲಕಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ (Usha Thakur) ಅವರು, ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಈ ರೀತಿಯ ಕಠಿಣ ಶಿಕ್ಷೆ ನೀಡುವುದರಿಂದ ಮತ್ತೆ ಇಂತಹ ಕೃತ್ಯವೆಸಗಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

RApe 1

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶ ಸರ್ಕಾರವು ಇಂತಹ ಅನಾಗರಿಕ ಕೃತ್ಯಗಳ ವಿರುದ್ಧ ಕಠಿಣವಾಗಿ ಮತ್ತು ಎಚ್ಚರದಿಂದ ವ್ಯವಹರಿಸುತ್ತಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಮಾಡಿ ಕೊಟ್ಟ ದೇಶದ ಮೊದಲ ರಾಜ್ಯ ಇದಾಗಿದೆ. ಇಲ್ಲಿಯವರೆಗೆ ಅತ್ಯಾಚಾರ ಕೃತ್ಯವೆಸಗಿದ 72 ಮಂದಿಗೆ ಮರಣದಂಡನೆ ವಿಧಿಸಲಾಗಿದೆ. ಆದರೂ ಅತ್ಯಾಚಾರಗಳು ನಡೆಯುತ್ತಲೇ ಇದೆ. ಇದು ಸಮಾಜಕ್ಕೆ, ಪ್ರಜಾಪ್ರಭುತ್ವಕ್ಕೆ, ಮಾಧ್ಯಮ ಮತ್ತು ನಮ್ಮೆಲ್ಲರಿಗೂ ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೂ ಸಂಚಾರ ಆರಂಭಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ – ನ.11ಕ್ಕೆ ಮೋದಿ ಚಾಲನೆ

Shivraj Singh Chauhan

ನಾನಾ ಮಾರ್ಗಗಳ ಮೂಲಕ ಸಮಾಜವನ್ನು ಬೆಳಗಿಸಬೇಕು. ಆದರೆ ಇಂತಹ ಕೃತ್ಯಗಳಲ್ಲಿ ಯಾರಾದರೂ ಹೇಗೆ ತೊಡಗಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಹಾಗಾಗಿ ಅತ್ಯಚಾರವೆಸಗುವವರಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ನಾನು ಮನವಿ ಮಾಡುತ್ತೇನೆ. ಅಪರಾಧಿಗಳಿಗೆ ಜೈಲಿನಲ್ಲಿ ಮರಣದಂಡನೆ ವಿಧಿಸಲಾಗುತ್ತಿದೆ ಎನ್ನುತ್ತಾರೆ, ಆದರೆ ಅದು ಎಲ್ಲಿ ನಡೆಯುತ್ತಿದೆ ಅಂತ ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಸಿಕ್ಕಿಬಿದ್ದ ಇಬ್ಬರು ಅಪರಾಧಿಗಳನ್ನು ಖಾಂಡ್ವಾ ನಗರದ ಚೌಕದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರೆ, ಇಂತವರು ಮತ್ತೆ ಯಾವುದೇ ಮಗಳನ್ನು ಮುಟ್ಟುವ ಮೊದಲು ಸಾವಿರ ಬಾರಿ ಯೋಚಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಲ್ಲವರಿಗೆ ಮೀಸಲಾತಿ ನೀಡಿ – ಬೃಹತ್ ಹಕ್ಕೋತ್ತಾಯ

ಇತ್ತೀಚೆಗೆ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಖಾಂಡ್ವಾದಲ್ಲಿನ ಕಬ್ಬಿನ ಗದ್ದೆಗೆ ದುಷ್ಕರ್ಮಿಗಳು ಎಸೆದು ಹೋಗಿದ್ದರು. ಸೋಮವಾರ ಜಮೀನಿನ ಪೊದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದು, ಇಂದೋರ್‍ನ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದ್ದು, ಜಿಲ್ಲೆಯಲ್ಲಿ ಬೇರೆ, ಬೇರೆ ಅತ್ಯಾಚಾರವೆಸಗಿರುವ ಮತ್ತೊಬ್ಬ ಆರೋಪಿ ಕೂಡ ಸಿಕ್ಕಿಬಿದ್ದಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *