Bengaluru CityKarnatakaLatestLeading NewsMain Post

ರಾಜ್ಯದಲ್ಲೂ ಸಂಚಾರ ಆರಂಭಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ – ನ.11ಕ್ಕೆ ಮೋದಿ ಚಾಲನೆ

ಬೆಂಗಳೂರು: ರಾಜ್ಯದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಚಾಲನೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳು 11 ರಂದು ದೇಶದ ಐದನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಲಿದ್ದಾರೆ.

ದಕ್ಷಿಣ ಭಾರತದಲ್ಲಿ ಮೊದಲ ಸಂಚಾರ ಆರಂಭಿಸಲಿರುವ ಎಕ್ಸ್‌ಪ್ರೆಸ್‌ ಇದಾಗಲಿದೆ. ಮೈಸೂರಿನಿಂದ ಚೆನ್ನೈಗೆ, ಚೆನ್ನೈ ಟು ಮೈಸೂರು (Chennai-Mysuru) ಸಂಚಾರ ಮಾಡಲಿದೆ. 16 ಬೋಗಿಗಳನ್ನ ಒಳಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಇದಾಗಿದೆ. ಮೈಸೂರು-ಚೆನ್ನೈ ನಡುವಿನ ಸಂಚಾರ ದರ ಎಕಾನಮಿ ಕ್ಲಾಸ್ ದರ 921 ರೂ. ಆಗಿದೆ. ಇದನ್ನೂ ಓದಿ: ಶೀಘ್ರದಲ್ಲಿಯೇ ಹೈದರಾಬಾದ್‍ಗೆ ಲಗ್ಗೆ ಇಡಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್

ಉಭಯ ನಗರಗಳ ನಡುವಿನ ಪ್ರಯಾಣ ಸಮಯ 6 ಗಂಟೆ 40 ನಿಮಿಷ ಬೇಕಾಗುತ್ತೆ. ಮೈಸೂರು ಟು ಬೆಂಗಳೂರಿನ ನಡುವಿನ ಪ್ರಯಾಣ 2 ಗಂಟೆ ಆಗುತ್ತೆ. ವಂದೇ ಭಾರತ್ ರೈಲಿನ ವೇಗ 170 ಕಿಮೀ ಇದೆಯಾದರೂ, ಉಭಯ ನಗರಗಳ ಮಧ್ಯ 75 ಕಿಮೀ ವೇಗದಲ್ಲಿ ರೈಲು ಸಂಚರಿಸಲಿದೆ.

ಟಿಕೆಟ್‌ ದರ ಎಷ್ಟು?
ಮೈಸೂರಿನಿಂದ ಚೆನ್ನೈ ಗೆ ಎಕನಾಮಿ ಕ್ಲಾಸ್ ದರ 921 ರೂ., ಎಕ್ಸಿಕ್ಯುಟಿವ್ ದರ 1,880 ರೂ. ಇರಲಿದೆ. ಇನ್ನೂ ಮೈಸೂರಿನಿಂದ ಬೆಂಗಳೂರಿಗೆ ಎಕಾನಮಿ ಕ್ಲಾಸ್ ದರ 368 ರೂ. ಹಾಗೂ ಎಕ್ಸಿಕ್ಯುಟಿವ್ 768 ರೂ. ನಿಗದಿಪಡಿಸಲಾಗಿದೆ. ಶತಾಬ್ದಿಗೆ ಹೋಲಿಸಿದರೆ ಟಿಕೆಟ್ ದರ ಶೇ.39 ರಷ್ಟು ಹೆಚ್ಚು ಇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು

ವಾರದಲ್ಲಿ ಎಷ್ಟು ದಿನ ಸಂಚಾರ?
20607 ನಂಬರಿನ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರದಲ್ಲಿ 6 ದಿನ ಸಂಚಾರ ಮಾಡಲಿದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚರಿಸಲಿದೆ. ಪ್ರತಿ ದಿನ ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50 ಕ್ಕೆ ಹೊರಟು ಬೆಂಗಳೂರು ಸಿಟಿ ಜಂಕ್ಷನ್‌ಗೆ 10:25ಕ್ಕೆ ಸೇರಲಿದೆ. 5 ನಿಮಿಷಗಳ ಕಾಲ ನಿಲ್ದಾಣದಲ್ಲಿ ನಿಲ್ಲಲ್ಲಿದ್ದು, 10:30 ಕ್ಕೆ ಹೊರಟು 12:30 ಕ್ಕೆ ಮೈಸೂರು ತಲುಪಲಿದೆ. ಬಳಿಕ ವಾಪಸ್ ಮೈಸೂರಿನಿಂದ 1:05 ಕ್ಕೆ ಹೊರಡಲಿದ್ದು, ಬೆಂಗಳೂರಿಗೆ ಮಧ್ಯಾಹ್ನ 2:55 ಕ್ಕೆ ಸೇರಲಿದೆ. ಬೆಂಗಳೂರಿನಿಂದ 3 ಗಂಟೆಗೆ ಹೊರಟು ಚೆನ್ನೈಗೆ 7:35 ಕ್ಕೆ ತಲುಪಲಿದೆ. 20607 ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಜಂಕ್ಷನ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ಕಡೆ ನಿಲುಗಡೆಯನ್ನು ಹೊಂದಿರುತ್ತದೆ.

ಸೌಲಭ್ಯಗಳೇನು?
ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತದ ಮೊದಲ ಅರೆ ವೇಗದ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಪ್ರಯಾಣದ ಸಮಯವನ್ನು ಶೇ.25ರಿಂದ 45 ರಷ್ಟು ಕಡಿಮೆ ಮಾಡುತ್ತದೆ. ರೈಲು 0-100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತದೆ. ಎಲ್ಲಾ ವಂದೇ ಭಾರತ್ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಜಿಪಿಎಸ್ ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ವೈಫೈ ಮತ್ತು ಅತ್ಯಂತ ಆರಾಮದಾಯಕ ಆಸನ ಈ ರೈಲಿನ ವಿಶೇಷತೆ. ಕಾರ್ಯನಿರ್ವಾಹಕ ವರ್ಗವು ತಿರುಗುವ ಕುರ್ಚಿಗಳನ್ನು ಸಹ ಹೊಂದಿದ್ದಾರೆ. ರೈಲಿನಲ್ಲಿರುವ ಶೌಚಾಲಯಗಳು ಜೈವಿಕ ನಿರ್ವಾತ ಮಾದರಿಯವು. ದಿವ್ಯಾಂಗರಿಗಾಗಿ ಸ್ನೇಹಿ ವಾಶ್ ರೂಂಗಳು ಮತ್ತು ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳೊಂದಿಗೆ ಸೀಟ್ ಹ್ಯಾಂಡಲ್ ಅನ್ನು ಸಹ ರೈಲಿನಲ್ಲಿ ಒದಗಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸಲು ಪ್ಯಾಂಟ್ರಿ ವ್ಯವಸ್ಥೆ ಇರಲಿದೆ.

Live Tv

Leave a Reply

Your email address will not be published. Required fields are marked *

Back to top button