ಬೆಂಗಳೂರು: ಹಾವೇರಿಯ ಹಾನಗಲ್, ವಿಜಯಪುರದ ಸಿಂದಗಿ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ನಾಳೆವರೆಗೆ ಮನೆ ಮನೆ ಪ್ರಚಾರ ಆಗಲಿದೆ. ಈ ಹೊತ್ತಲ್ಲೇ, ಕುರುಡು ಕಾಂಚಾಣದ ಸದ್ದು ಜೋರಾಗ್ತಿದೆ.
ಸಿಂದಗಿಯ ಡಂಬಳದಲ್ಲಿ 1 ವೋಟಿಗೆ 1,000 ರೂಪಾಯಿ ಹಂಚುತ್ತಿರುವ ದೃಶ್ಯ ವೈರಲ್ ಅಗಿದೆ. ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿಯವರು 30-40 ಲಕ್ಷ ಹಂಚಿಕೆ ಮಾಡ್ತಿದ್ದು, 1 ಬೂತ್‍ಗೆ 5 ಲಕ್ಷ ಕೊಡ್ತಿದ್ದಾರೆ. ಹಳ್ಳಿ-ಹಳ್ಳಿಯಲ್ಲೂ ಹಣ ವಿತರಿಸ್ತಿದ್ದಾರೆ ಅಂತ ದೂರಿದ್ದಾರೆ. ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಬಿಜೆಪಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿರುವ ವಿಡಿಯೋ ದೃಶ್ಯವನ್ನು ತೋರಿಸಿದ್ದಾರೆ.
Advertisement
Advertisement
ಮತ್ತೊಂದು ಕಡೆ, ಅಬ್ಬರದ ಪ್ರಚಾರ ಮುಗಿಸಿರುವ ಅಗ್ರನಾಯಕರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ನಿವಾಸದಲ್ಲಿ ರಿಲ್ಯಾಕ್ಸ್ ಆಗಿದ್ದು, 2 ಕ್ಷೇತ್ರದಲ್ಲೂ ನಾವೇ ಗೆಲ್ಲೋದು ಅಂದಿದ್ದಾರೆ.
Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ, ಧಾರವಾಡದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ಮಗನ ಮದುವೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾತನಾಡಿ, ಎರಡೂ ಕಡೆ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆ ಮಾಡಿದ್ದು ತೋರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಗಾಳಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿ ರೈತರ ಮಧ್ಯೆ ಬನ್ನಿ ಸುಧಾಕರ್ಗೆ ರಮೇಶ್ ಕುಮಾರ್ ಟಾಂಗ್