ಕೋಲಾರ: ಇಲ್ಲಿರುವ ನಾವೆಲ್ಲರೂ ರೈತರಿಗೆ ಹುಟ್ಟಿದ್ದು, ಗಾಳಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು, ಅಂತರಿಕ್ಷದಲ್ಲಿ ಕುಳಿತು ಮಾತನಾಡಬೇಡಿ ರೈತರ ಮಧ್ಯೆ ಬನ್ನಿ, ನಾನ್ಯಾರು ಗೊತ್ತಾ ದೇವರಾಜ ಅರಸ್ ಶಿಷ್ಯ, ಅವರಿಗೆ ನಾವು ಟಾರ್ಗೆಟ್ ಆದ್ರೆ ಖುಷಿಯ ವಿಚಾರ ಅದೆ ನನಗೆ ಗೌರವ ಎಂದು ಆರೋಗ್ಯ ಸಚಿವ ಸುಧಾಕರ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.
Advertisement
ಇತ್ತೀಚೆಗೆ ಸುಧಾಕರ್ ಡಿಸಿಸಿ ಬ್ಯಾಂಕ್ ವಿರುದ್ಧ ಆರೋಪ ಮಾಡಿ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಎಂದಿದ್ದರು. ಈ ಹಿನ್ನೆಲೆಯಲ್ಲಿ ಕೋಲಾರದ ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್‍ನಲ್ಲಿ ರೈತರ ಮಾಲ್ ಆರಂಭ ಮಾಡುವ ನಿಟ್ಟಿನಲ್ಲಿ ಅವಳಿ ಜಿಲ್ಲೆಯ ಶಾಸಕರ ಸಭೆ ಕರೆಯಲಾಗಿತ್ತು, ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ವಿರುದ್ಧ ಮಾತನಾಡುವರ ಮೇಲೆ ಮುಗಿ ಬಿದ್ದರು. ಇಲ್ಲಿರುವ ನಾವೆಲ್ಲರೂ ರೈತರಿಗೆ ಹುಟ್ಟಿರೋದು, ನಮ್ಮನ್ನು ಹುಟ್ಟಿಸಿದ ಅಪ್ಪ, ಅಮ್ಮ ಹಾಗೆ ಸತ್ತರು. ನಾವು ಹಾಗೆ ಸತ್ತರು ನಮ್ಮಕ್ಕಳು ಹಾಗೆ ಸಾಯುವುದು ಬೇಡ. ಅವರನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಡಿಸಿಸಿ ಬ್ಯಾಂಕ್‍ನ ವಿಚಾರವಾಗಿ ಗಾಳಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ನೇರ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ರಮೇಶ್ ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
Advertisement
Advertisement
ಕಾಂಗ್ರೆಸ್‍ನವರು ಮಾತ್ರ ಸಭೆ ಸೇರಿದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ಆಸಕ್ತಿ ಇದ್ಯೋ ಅವರು ಮಾತ್ರ ಬರ್ತಾರೆ, ಕದರಿ ನರಸಿಂಹ ಸ್ವಾಮಿ ಮೇಲೆ ನಂಬಿಕೆ ಇರೋರು, ಹರಕೆ ಹೊತ್ತಿರುವವರು, ಬಿಡುವು ಇರೋರು ಬಂದಿದ್ದಾರೆ. ಕೆಲವರು ಡಾಬಾದಲ್ಲಿ ಕುಳಿತು ದೇವರನ್ನು ಮರೆತು ಬಿಟ್ಟಿರುತ್ತಾರೆ. ಅವರನ್ನು ಬಲವಂತವಾಗಿ ನರಸಿಂಹ ಸ್ವಾಮಿ ಮುಂದೆ ನಿಲ್ಲಿಸಕ್ಕಾಗಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮಾತ್ರ ಡಿಸಿಸಿ ಬ್ಯಾಂಕ್ ಸೀಮಿತಿವಾಗಿದೆ ಅನ್ನೋರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
Advertisement
ಪಕ್ಷ, ಜಾತಿ, ಪಂಗಡ ಯಾವುದನ್ನು ನೋಡದೆ ಸಾಲ ಕೊಟ್ಟಿದ್ದೇವೆ, ಯಾರಾದ್ರು ಸಂಘ ರಚನೆ ಮಾಡಿಕೊಂಡು ಬಂದು ಉದ್ದೇಶ ಪೂರ್ವಕವಾಗಿ ಸಾಲ ಕೊಟ್ಟಿಲ್ಲ ಹಾಗೆನಿದ್ದರೂ ಕೇಳಬಹುದು. ಅದು ಬಿಟ್ಟು ಗಾಳಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು. ಬ್ಯಾಂಕ್ ನಲ್ಲಿ ಅವ್ಯವಹಾರ ಆಗಿದ್ರೆ ಕಾನೂನಲ್ಲಿ ಅವಕಾಶ ಇದೆ. ದಾವೆಯನ್ನು ಹೂಡಲಿ ಅದು ಬಿಟ್ಟು ಗಾಳಿಯಲ್ಲಿ ಮಾತನಾಡುವುದು ಬಿಡಬೇಕು. ಸುಮಾರು 10 ವರ್ಷಗಳ ಕಾಲ ಬ್ಯಾಂಕ್ ಮುಚ್ಚಿದಾಗ ನೀವು ಮಾತನಾಡಿಲ್ಲ. ಅವರೂ ಮಾತನಾಡಿಲ್ಲ, ಈಗ ಬ್ಯಾಂಕಿನ ಬಗ್ಗೆ ಹಗುರವಾಗಿ ಜವಾಬ್ದಾರಿ ಇಲ್ಲದೆ ಮಾತನಾಡುವುದನ್ನು ಬಿಡಿ ನೀವು ಲೋನ್ ಅಪ್ಲೆ ಮಾಡಿದ್ರಾ, ಬೋರ್ ವೆಲ್ ಕೊರೆಸಿದ್ರಾ, ಜಮೀನ್ ಸಾಲ ಮಾಡಿ ಆಸ್ತಿಗೆ ಲೋನ್ ಮಾಡಿದ್ರ, ಬೆಳೆಗೆ ಬೆಲೆ ಸಿಗದೆ ಯಾರಾದ್ರು ನಿಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ್ರಾ. ಆ ನೋವಿದ್ರೆ ವಿಷಾದ ಇದ್ರೆ ಕೇಳಿ, ಅಂತರಿಕ್ಷದಲ್ಲಿ ಕುಳಿತು ಮಾತನಾಡಬೇಡಿ ಎಂದು ಕಿಡಿಕಾರಿದರು.