ಹಾವೇರಿ: ರಾಜ್ಯಾದ್ಯಾಂತ ಸದ್ದುಮಾಡಿದ್ದ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪೊಲೀಸರು (Hanagal Police) 873 ಪುಟಗಳ ದೋಷಾರೋಪ ಪಟ್ಟಿಯನ್ನು ಜೆಎಮ್‌ಎಫ್‌ಸಿ ಹಾನಗಲ್ ಕೋರ್ಟ್‌ಗೆ (JMFC Hanagal Court) ಸಲ್ಲಿಕೆ ಮಾಡಿದ್ದಾರೆ.
ಗ್ಯಾಂಗರೇಪ್ ಘಟನೆ ನಡೆದು 58 ದಿನಗಳ ಬಳಿಕ ಚಾರ್ಜ್ ಶೀಟ್ (ChargSheet) ಸಲ್ಲಿಕೆಯಾಗಿದೆ. ಕಳೆದ ಜನವರಿ 8 ರಂದು ಹಾನಗಲ್ ಬಳಿ ಗ್ಯಾಂಗ್ ರೇಪ್ ಪ್ರಕರಣ ನಡೆದಿತ್ತು. ಶಿರಸಿ ಮೂಲದ 26 ವರ್ಷದ ಮುಸ್ಲಿಂ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು.
Advertisement
Advertisement
ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದ 7 ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 19 ಆರೋಪಿಗಳ ಹೆಸರನ್ನೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಗುರುತು ಪತ್ತೆ ಪರೇಡ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು. 7 ಪ್ರಮುಖ ಆರೋಪಿಗಳಾದ ಅಫ್ತಾಬ್, ಚಂದನ್‌ಕಟ್ಟಿ, ಮದರ್ ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲಾನವರ, ಶೋಯಿಬ್ ನಿಯಾಜ್ ಅಹ್ಮದ್ ಮುಲ್ಲಾ, ಮಹಮದ್ ಸಾದೀಕ್ ಅಗಸಿಮನಿ, ತೌಷಿಪ್ ಕಾಟಲಾ ರಿಯಾಜ್ ಸಾವಿಕೇರಿ ಇವರನ್ನು ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ; ಎರಡು ಸ್ಥಳದಲ್ಲಿ ಸಾಮೂಹಿಕವಾಗಿ ರೇಪ್ ಮಾಡಿದ್ದಾರೆ: ಸಂತ್ರಸ್ತೆ ಸಂಬಂಧಿ
Advertisement
Advertisement
ವಿಧಿವಿಜ್ಞಾನ ಪ್ರಯೋಗಾಲಯ ವರದಿ ಹಾಗೂ ಡಿಎನ್‌ಎ ಮಾದರಿ, ಕೂದಲು, ಆರೋಪಿಗಳ ರಕ್ತದ ಮಾದರಿ ಸೇರಿದಂತೆ ಘಟನೆ ವೇಳೆ ಸಿಕ್ಕ ಬಟ್ಟೆಗಳು, ಸಿಸಿಟಿವಿ ದ್ಯಶ್ಯಾವಳಿ, ಕೃತ್ಯಕ್ಕೆ ಬಳಸಿದ್ದ ಬೈಕ್, ಕಾರ್ ಸೇರಿದಂತೆ ಎಲ್ಲದರ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ವೈದ್ಯರು, ಪೊಲೀಸರು, ಕೆಲವು ಸ್ಥಳೀಯರು ಸೇರಿದಂತೆ 87 ಸಾಕ್ಷಿಗಳ ವಿಚಾರಣೆಯನ್ನೂ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಅತ್ಯಾಚಾರ ಮಾಡಿದ್ರು – ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ