ಟೆಲ್ ಅವೀವ್: ದಿನದಿಂದ ದಿನಕ್ಕೆ ಇಸ್ರೇಲ್-ಹಮಾಸ್ ಯುದ್ಧ (Israel Hamas War) ಭೀಕರವಾಗುತ್ತಿದ್ದು, ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ 4,469 ಮಂದಿ ಹಾಗೂ 1,400 ಇಸ್ರೇಲಿಯನ್ನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಈ ನಡುವೆ ಇಸ್ರೇಲ್‌ನಿಂದ ಹಮಾಸ್ ಉಗ್ರರು ಅಪಹರಿಸಿದ್ದ 200ಕ್ಕೂ ಹೆಚ್ಚು ಒತ್ತೆಯಾಳುಗಳ (Hostages) ಪೈಕಿ ಇಬ್ಬರು ಅಮೆರಿಕದ (USA) ಪ್ರಜೆಗಳನ್ನು ಶನಿವಾರ ಬಿಡುಗಡೆ ಮಾಡಿದ್ದು, ಇಸ್ರೇಲ್ ಸಹ ಅದೇ ಕಾರ್ಯತಂತ್ರವನ್ನು ರೂಪಿಸಿದೆ. ಇದನ್ನೂ ಓದಿ: ಹಮಾಸ್ ಉಗ್ರರಿಂದ ಇಬ್ಬರು ಒತ್ತೆಯಾಳುಗಳ ಬಿಡುಗಡೆ – ಮತ್ತಷ್ಟು ಜನರ ರಿಲೀಸ್ ಸಾಧ್ಯತೆ
Advertisement
Advertisement
ಹಮಾಸ್‌ನ ಸಶಸ್ತ್ರ ವಿಭಾಗದ ವಕ್ತಾರ ಅಬು ಉಬೈದಾ (Abu Ubaida) ಈ ಬಗ್ಗೆ ಮಾತನಾಡಿದ್ದು, ಕಳೆದ ಶುಕ್ರವಾರ ಹಮಾಸ್ ಉಗ್ರರ ಗುಂಪು ಹೆಚ್ಚುವರಿಯಾಗಿ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶವನ್ನು ಕತಾರ್‌ಗೆ ತಿಳಿಸಲಾಗಿತ್ತು. ಆದ್ರೆ ಅದೇ ದಿನ ಇಬ್ಬರು ಅಮೆರಿಕನ್ನರಾದ ಜುಡಿತ್ ತೈ ರಾನಾನ್ ಮತ್ತು ಅವರ ಮಗಳು ನಟಾಲಿಯನ್ನು ಬಿಡುಗಡೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.
Advertisement
ಹಮಾಸ್ ಉಗ್ರರ ಕಾರ್ಯವಿಧಾನವನ್ನೇ ಅನುಸರಿಸುತ್ತಿರುವ ಇಸ್ರೇಲ್ ಸಹ ಭಾನುವಾರ (ಇಂದು) ಹಮಾಸ್‌ನ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ಅಬು ಉಬೈದಾ ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ 5,000ಕ್ಕೂ ಹೆಚ್ಚು ಮಂದಿ ಬಲಿ – ಗಾಜಾಗೆ ನುಗ್ಗಲು ಯಹೂದಿ ಸೇನೆ ರೆಡಿ
Advertisement
ಅಕ್ಟೋಬರ್ 7 ರಂದು ನಡೆದ ಭೀಕರ ದಾಳಿಯಲ್ಲಿ ಹಮಾಸ್ ಉಗ್ರರು 210 ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಸದ್ಯ ಇಸ್ರೇಲ್ ಕ್ಷಿಪಣಿ ದಾಳಿಗೆ ಗಾಜಾ ಛಿದ್ರ ಛಿದ್ರವಾಗಿದೆ. ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆಯ ಬಾಂಬ್ ದಾಳಿ ವಿಡಿಯೋಗಳು ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿವೆ. ಅತ್ತ ಲೆಬನಾನ್ ಭೂಪ್ರದೇಶದಲ್ಲಿನ ಹಿಜ್ಬುಲ್ಲಾ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕಾ ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಹಮಾಸ್ ಉಗ್ರರ ಕೃತ್ಯ ಖಂಡಿಸಿದ್ದಕ್ಕೆ ಬಹರೇನ್‌ನಲ್ಲಿ ಮಂಗಳೂರಿನಲ್ಲಿ ಓದಿದ ವೈದ್ಯ ಅರೆಸ್ಟ್
Web Stories