ಟೆಲ್ ಅವೀವ್: ಇಸ್ರೇಲ್‍ನಿಂದ (Israel) ಹಮಾಸ್ (Hamas) ಉಗ್ರರು ಅಪಹರಿಸಿದ್ದ 200 ಒತ್ತೆಯಾಳುಗಳ ಪೈಕಿ ಇಬ್ಬರು ಅಮೆರಿಕದ (America) ಪ್ರಜೆಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಜನರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ.
ಹಮಾಸ್ ಉಗ್ರರ ವಶದಲ್ಲಿದ್ದ ಅಮೆರಿಕ ಮೂಲದ ಜುಡಿತ್ ತೈ ರಾನನ್ ಮತ್ತು ಅವರ ಮಗಳು ನಟಾಲಿ ಶೋಷನಾ ರಾನನ್ ತಡರಾತ್ರಿ ಇಸ್ರೇಲ್‍ಗೆ ಮರಳಿದ್ದಾರೆ. ಅವರ ಬಿಡುಗಡೆ ಬಳಿಕ ಅಮೆರಿಕ ಅಧ್ಯಕ್ಷ್ಯ ಜೋ ಬೈಡನ್ ಅವರ ಬಳಿ ಫೋನ್‍ನಲ್ಲಿ ಮಾತಾಡಿದ್ದಾರೆ. ಈ ವಿಷಯ ಬಹಳ ಸಂತೋಷ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Gaganyaan Mission: ತಾಂತ್ರಿಕ ದೋಷದಿಂದ ಸದ್ಯಕ್ಕೆ ಮೊದಲ ಪರೀಕ್ಷಾರ್ಥ ಹಾರಾಟ ಸ್ಥಗಿತ
Advertisement
Advertisement
ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಕತಾರ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆ ನಡೆಸಿ ಒತ್ತಡ ಹಾಕಲಾಗುತ್ತಿದೆ. ಇದರಿಂದ ಹೆಚ್ಚಿನ ಜನರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಸಾಂಕೇತಿಕವಾಗಿ ಆದ ಬಿಡುಗಡೆ ಎಂದು ಇಸ್ರೇಲ್ ಸರ್ಕಾರ ಹೇಳಿಕೊಂಡಿದೆ.
Advertisement
Advertisement
ಅಕ್ಟೋಬರ್ 7 ರಂದು ಇಸ್ರೇಲ್-ಗಾಜಾ ಗಡಿಯ (Gaza Border) ಸಮೀಪವಿರುವ ನಹಾಲ್ ಓಜ್ ಕಿಬ್ಬುಟ್ಜ್‍ನಿಂದ ಹಮಾಸ್ ಉಗ್ರರು ಅವರನ್ನು ಅಪಹರಿಸಿದ್ದರು. ಅಪಹರಿಸಲ್ಪಟ್ಟವರಲ್ಲಿ ಹೆಚ್ಚಿನವರು ಇನ್ನೂ ಜೀವಂತವಾಗಿದ್ದಾರೆ. 20 ಕ್ಕೂ ಹೆಚ್ಚು ಒತ್ತೆಯಾಳುಗಳು ಅಪ್ರಾಪ್ತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇದನ್ನೂ ಓದಿ: ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ದೂರಮಾಡಿದ ಬಳ್ಳಾರಿ ಪೊಲೀಸರು!
Web Stories