ಟೆಲ್ ಅವಿವ್: ಯುದ್ಧದ ನಡುವೆ ಇಸ್ರೇಲ್‌ಗೆ (Israel) ಬೆಂಬಲ ಸೂಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅವರ ಮನವಿಯ ಮೇರೆಗೆ ಇದೀಗ ಇಸ್ರೇಲ್ ಯುದ್ಧ ಪೀಡಿತ ಪ್ರದೇಶ ಗಾಜಾಗೆ (Gaza) ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ಅನುಮತಿಸಿದೆ.
ಇಸ್ರೇಲ್ ಸೀಮಿತ ಪೂರೈಕೆಯನ್ನು ಒಪ್ಪಿದ ಬಳಿಕ ಇದೀಗ ಈಜಿಪ್ಟ್ ತನ್ನ ರಫಾ ಗಡಿ ಮೂಲಕ ಗಾಜಾಗೆ ಮಾನವೀಯ ನೆರವನ್ನು ಒದಗಿಸುತ್ತಿದೆ. ಅಮೆರಿಕ ಅಧ್ಯಕ್ಷ ಇಸ್ರೇಲ್‌ನಿಂದ ನಿರ್ಗಮಿಸಿದ ತಕ್ಷಣ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಮತ್ತೆ ಭೀಕರ ದಾಳಿ ಮುಂದುವರಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೆರರ್ ಫಂಡಿಂಗ್‍ಗೆ ಕಡಿವಾಣ – ವಿದೇಶಿ ವ್ಯವಹಾರದ ಮೇಲೆ ಕೇಂದ್ರ ಕಣ್ಣು
ಬೈಡನ್ ಭೇಟಿ ಬೆನ್ನಲ್ಲೇ ಗುರುವಾರ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ (Rishi Sunak) ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಿ ಸುನಾಕ್ ಯುದ್ಧದ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಿದ್ದಾರೆ.
ಸುಮಾರು 500 ಜನರ ಸಾವಿಗೆ ಕಾರಣವಾದ ಆಸ್ಪತ್ರೆ ಮೇಲಿನ ರಾಕೆಟ್ ದಾಳಿ ಇಸ್ರೇಲ್ ನಡೆಸಿಲ್ಲ ಎಂದು ತಮ್ಮ ಗುಪ್ತಚರ ಸ್ಪಷ್ಟಪಡಿಸಿದ್ದಾಗಿ ಅಮೆರಿಕ ತಿಳಿಸಿದೆ. ಅಕ್ಟೋಬರ್ 7 ರಿಂದ ಪ್ರಾರಂಭವಾದ ಹಮಾಸ್-ಇಸ್ರೇಲ್ ಯುದ್ಧದಲ್ಲಿ ಇಲ್ಲಿಯವರೆಗೆ ಎರಡೂ ಕಡೆಗಳಲ್ಲಿ ಸುಮಾರು 4,000 ಜನರು ಬಲಿಯಾಗಿದ್ದಾರೆ. ಇದನ್ನೂ ಓದಿ: ಗೋ ಬ್ಯಾಕ್ ರಿಜ್ವಾನ್ – ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆಯ ಬಿಸಿ
Web Stories