ಮುಂಬೈ: ಸಿಮೀತ ಓವರ್ ಗಳ ರನ್ ಮಿಷಿನ್ ಎಂದೇ ಹೆಸರು ಪಡೆದಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಕುರಿತು ಸದ್ಯ ಯಾವುದೇ ಯೋಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ತಮ್ಮ ವೃತ್ತಿ ಜೀವನ ಅರ್ಧ ಭಾಗ ಪೂರ್ಣಗೊಂಡಿದ್ದು, ಉಳಿದ ಸಮಯವನ್ನು ಉತ್ತಮ ಪ್ರದರ್ಶನ ನೀಡಿ ಸಂತಸದಿಂದ ಕಳೆಯಬೇಕು. ಸಿಮೀತ ಓವರ್ ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸಿದ್ದು, ಆಯ್ಕೆ ಸಮಿತಿ ತನ್ನನ್ನು ಟೆಸ್ಟ್ ಕ್ರಿಕೆಟ್‍ಗೆ ಆಯ್ಕೆ ಮಾಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಟೀಂ ಇಂಡಿಯಾ ಪರ ಸಿಮೀತ ಓವರ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರೋಹಿತ್, ಟೆಸ್ಟ್ ಮಾದರಿಯಲ್ಲಿ ಕಳಪೆ ದಾಖಲೆಯನ್ನು ಹೊಂದಿದ್ದಾರೆ. ಇದುವರೆಗೂ 25 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ 39.97 ಸರಾಸರಿಯಲ್ಲಿ 1,479 ರನ್ ಗಳನ್ನು ಗಳಿಸಿದ್ದಾರೆ.
Advertisement
20 ವರ್ಷ ವಯಸ್ಸಿಲ್ಲೇ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, 6 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕಳಪೆ ಫಾರ್ಮ್ ನಿಂದ ಬಹುಬೇಗ ಟೆಸ್ಟ್ ಕ್ರಿಕೆಟ್ ಅವಕಾಶಗಳನ್ನು ಕೈಚೆಲ್ಲಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಕಳಪೆ ಪ್ರದರ್ಶನ ನೀಡಿದ ಕಾರಣ ಮುಂಬರುವ ಜೂನ್ 14 ರಂದು ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್ ನಿಂದಲೂ ಕೈಬಿಡಲಾಗಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೋಹಿತ್ ಶರ್ಮಾ ಅಯ್ಕೆ ಸಮಿತಿಯ ನಿರ್ಧಾರದಿಂದ ತಾನು ಅಚ್ಚರಿಗೊಂಡಿಲ್ಲ. ಟೀಂ ಇಂಡಿಯಾ ಮುಂದೇ ಹಲವು ಸರಣಿಗಳಲ್ಲಿ ಭಾಗವಹಿಸಬೇಕಿದೆ. ಸದ್ಯ ತಾನು ಈ ಕುರಿತು ಗಮನಹರಿಸಿರುವುದಾಗಿ ತಿಳಿಸಿದ್ದಾರೆ.