ನವದೆಹಲಿ: 2025 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ (South Africa) ಮಾರಾಟವಾದ ಕಾರುಗಳ (Car) ಪೈಕಿ ಅರ್ಧದಷ್ಟು ಕಾರುಗಳು ಭಾರತದಲ್ಲಿ (India) ಉತ್ಪಾದನೆಯಾಗಿದೆ ಎಂದು ವರದಿ ತಿಳಿಸಿದೆ.
ಲೈಟ್‌ಸ್ಟೋನ್‌ನ ವರದಿಯ ಪ್ರಕಾರ, ಮಹೀಂದ್ರಾ ಮತ್ತು ಟಾಟಾ ಕಂಪನಿಗಳ ಕಾರುಗಳು ಹೆಚ್ಚು ಮಾರಾಟವಾಗಿದೆ. 2024 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಎಲ್ಲಾ ಜಪಾನೀಸ್-ಬ್ರಾಂಡೆಡ್ ಲಘು ವಾಹನಗಳಲ್ಲಿ 84% ಭಾರತದಿಂದ ಆಮದಾಗಿತ್ತು. 10% ಜಪಾನ್‌ನಲ್ಲಿ ನಿರ್ಮಾಣವಾದ ಕಾರು ಮಾರಾಟವಾಗಿದೆ.
ವಿಶ್ವದಲ್ಲಿ ಸಾಧಾರಣವಾಗಿ ಚೀನಿ ಕಂಪನಿಗಳ ಕಾರು ಹೆಚ್ಚು ಮಾರಾಟವಾಗುತ್ತವೆ. ಆದರೆ ಆಫ್ರಿಕಾದಲ್ಲಿ ಆಮದು ಮಾಡಿಕೊಂಡ ಭಾರತ ಕಾರುಗಳು ಜನಪ್ರಿಯವಾಗಿದೆ. ಇದನ್ನೂ ಓದಿ: 2026ರ ಅಂತ್ಯಕ್ಕೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್: ಗಡ್ಕರಿ ಘೋಷಣೆ
2025 ರ ಮೊದಲ ಐದು ತಿಂಗಳಲ್ಲಿ ಎಲ್ಲಾ ಪ್ರಯಾಣಿಕ ವಾಹನ ಮಾರಾಟದಲ್ಲಿ 49% ಭಾರತದಿಂದ ಆಮದು ಮಾಡಿದ ವಾಹನಗಳು ಮಾರಾಟವಾಗಿವೆ.
ಬೇರೆ ದೇಶಗಳಿಂದ ಆಮದಾಗಿರವ ಕಾರುಗಳ ಬೆಲೆ ಜಾಸ್ತಿ ಇದ್ದರೆ ಭಾರತದ ಕಾರುಗಳ ಬೆಲೆ ಕಡಿಮೆಯಿದೆ. 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾದ ಸುಮಾರು ಅರ್ಧದಷ್ಟು ಲಘು ವಾಹನಗಳು ಸ್ಥಳೀಯವಾಗಿ ಉತ್ಪಾದಿಸಲ್ಪಟ್ಟವು. ಆ ಸಮಯದಲ್ಲಿ ಕೇವಲ 5% ಮಾತ್ರ ಭಾರತದ ಕಾರುಗಳು ಮಾರಾಟವಾಗುತ್ತಿದ್ದವು.

