ತಾಲಿಬಾನ್ ಆಡಳಿತ – ಉದ್ಯೋಗ ಕಳೆದುಕೊಂಡು 5 ಲಕ್ಷ ಅಫ್ಘಾನಿಸ್ತಾನಿಯರು ಕಂಗಾಲು

Public TV
1 Min Read
Afghanistan Protest 1

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ನಂತರ ಸುಮಾರು 5 ಲಕ್ಷದಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಯುಎನ್ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ತಿಳಿಸಿದೆ.

ದೇಶದಲ್ಲಿ ಆರ್ಥಿಕತೆಗೆ ಪಾರ್ಶ್ವವಾಯು ಹಿಡಿದಿದ್ದು, ಜನರು ಉದ್ಯೋಗವಿಲ್ಲದೇ ಕಂಗಾಲಾಗಿದ್ದಾರೆ. ಮುಖ್ಯವಾಗಿ ಮಹಿಳೆಯರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಐಎಲ್‌ಒ ವಿಶ್ಲೇಷಿಸಿದೆ. ಇದನ್ನೂ ಓದಿ: ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯ್ತು ಅಪರೂಪದ ಕಪ್ಪು ವಜ್ರ

TALIBAN 2

ಅಫ್ಘಾನಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಪರಿಣಾಮವಾಗಿ ಈ ವರ್ಷದ ಮಧ್ಯಭಾಗದಲ್ಲಿ ಉದ್ಯೋಗ ನಷ್ಟ ಸುಮಾರು 7 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದೆ ಈ ಪ್ರಮಾಣ 9 ಲಕ್ಷಕ್ಕೆ ತಲುಪಲಿದೆ.

ಜಾಗತಿಕ ಮಾನದಂಡಗಳ ಪ್ರಕಾರ ಮಹಿಳೆಯರ ಉದ್ಯೋಗ ಪ್ರಮಾಣ ಈಗಾಗಲೇ ತೀರಾ ಕಡಿಮೆಯಾಗಿದೆ. 2021ರ ಮೂರನೇ ತ್ರೈಮಾಸಿಕದಲ್ಲಿ ಶೇ.16ರಷ್ಟು ಕುಸಿದಿತ್ತು. 2022ರ ಮಧ್ಯದ ವೇಳೆಗೆ ಆ ಪ್ರಮಾಣ ಶೇ.21ರಿಂದ 28ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

Taliban

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯು ಗಂಭೀರವಾಗಿದೆ. ಆರ್ಥಿಕತೆಯ ಚೇತರಿಕೆಗೆ ತಕ್ಷಣದ ಬೆಂಬಲ ಅಗತ್ಯವಿದೆ ಎಂದು ಐಎಲ್‌ಒ ಹಿರಿಯ ಸಂಯೋಜಕ ರಮಿನ್ ಬೆಹ್ವಾದ್ ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾಣ ವಲಯದ ಕಾರ್ಮಿಕರು ಕಂಗಾಲಾಗಿದ್ದಾರೆ. ಪ್ರಮುಖ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡಿವೆ. ತಾಲಿಬಾನ್ ಆಕ್ರಮಣದ ನಂತರ ಆಫ್ಘನ್ ಭದ್ರತಾ ಪಡೆ ಸದಸ್ಯರು ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕತೆಯಲ್ಲಿ ನಗದು ಕೊರತೆಯಿಂದಾಗಿ ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಾರಾಷ್ಟ್ರೀಯ ದಾನಿಗಳ ಬೆಂಬಲವೂ ಕುಸಿಯುತ್ತಿದೆ ಎಂದು ಐಎಲ್‌ಒ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *