ರಾಯಚೂರು: ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.
ರಾಯಚೂರಿನಲ್ಲಿ ಕೋವಿಡ್ ಹಾಗೂ ಪ್ರಕೃತಿ ವಿಕೋಪ ಹಾನಿ ಪರಿಹಾರ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ತಮ್ಮ ಅಧಿಕಾರವಧಿಯಲ್ಲಿ ಎಲ್ಲಾ ಅವಕಾಶ ಇದ್ದರೂ ಆಗ ಏನೂ ಮಾಡಿರಲಿಲ್ಲ, ಆದರೆ ಈಗ ಮೇಕೆದಾಟು ನೆನಪಾಗಿದೆ. ಕಾಂಗ್ರೆಸ್‍ನವರು ಈಗ ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
Advertisement
Advertisement
ಹಿಂದೆ ಕೂಡಲಸಂಗಮದಲ್ಲಿ ಕಾಂಗ್ರೆಸ್ ನಡೆ ಕೃಷ್ಣೆ ಕಡೆ ಎಂಬ ಯಾತ್ರೆ ನಡೆಸಿದ್ದರು. ಕೃಷ್ಣ ಭಾಗದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಐದು ವರ್ಷದಲ್ಲಿ ಕೇವಲ 7,500 ಕೋಟಿ ರೂ. ಮಾತ್ರ ನೀಡಿದ್ದರು. ಅವರು ಮಾಡಿದ ಯಡವಟ್ಟಿನಿಂದ ಎಲ್ಲ ಯೋಜನೆಗಳಿಗೆ ಗ್ರಹಣ ಹಿಡಿದಿದೆ ಅಂತ ಆರೋಪಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅವರ ನಾಟಕ ಬಯಲಾಗಿದೆ. ಈಗ ಆ ಭಾಗದಲ್ಲಿ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ, ನಿಮ್ಗೆ ಒಳ್ಳೆಯದಾಗಲ್ಲ: ಡಿಕೆಶಿ ಕಣ್ಣೀರು