ಬೆಂಗಳೂರು: ಹಲಾಲ್ ಬಾಯ್ಕಾಟ್ (Halal Boycott) ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಹಲಾಲ್ ಮುಕ್ತ ಯುಗಾದಿ (Yugadi) ಹಬ್ಬದ ಆಚರಣೆಗಾಗಿ ರಾಜಧಾನಿಯಲ್ಲಿ ಮಂಗಳವಾರದಿಂದ ಹಲಾಲ್ ಬಾಯ್ಕಾಟ್ ಅಭಿಯಾನ ಶುರುವಾಗಲಿದೆ.
ಹಿಂದೂಪರ ಸಂಘಟನೆಯ ಕಾರ್ಯಕರ್ತರು ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಮಧ್ಯಾಹ್ನ ೧ ಗಂಟೆಗೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಲಾಲ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಎರಡು ಗಂಟೆಗೆ ಸರಿಯಾಗಿ ಬೆಂಗಳೂರು (Bengaluru) ನಗರದ ಜಿಲ್ಲಾಧಿಕಾರಿಗಳ ಮೂಲಕ ಹಲಾಲ್ ಸರ್ಟಿಫಿಕೇಟ್ ಬ್ಯಾನ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ 6 ವರ್ಷವಿದ್ದು ಮಗು ಮಾಡಿಕೊಂಡಿದ್ದ ಮಹಿಳೆ – ವಿಷಯ ತಿಳಿಯುತ್ತಲೇ ಪತಿಯಿಂದ ಪತ್ನಿ ಕೊಲೆ
Advertisement
Advertisement
ಸಂಜೆ ನಾಲ್ಕು ಗಂಟೆಗೆ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರೋಡಿನಲ್ಲಿ ಅಭಿಯಾನವನ್ನು ನಡೆಸಲಿದ್ದು, ನಗರದಾದ್ಯಂತ ಭಿತ್ತಿಪತ್ರ ಹಂಚುವ ಮೂಲಕ ಹಲಾಲ್ ಮುಕ್ತ ಯುಗಾದಿ ಹಬ್ಬ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಲಿದ್ದಾರೆ. ಸಂಜೆ ೫ ಗಂಟೆಗೆ ವಿಜಯನಗರದ (Vijayanagara) ಸಂಕಷ್ಟಹರ ಗಣಪತಿ ದೇವಸ್ಥಾನ ಸೇರಿದಂತೆ ಹಲವೆಡೆ ಅಭಿಯಾನ ನಡೆಸಲಿದ್ದಾರೆ. ಈ ಮೂಲಕ ಗುರುವಾರದ ಹೊಸತೊಡಕಿಗೆ ಹಿಂದೂ ಸಂಪ್ರದಾಯದಂತೆ ಜಟ್ಕಾಕಟ್ (Jhatka Cut) ಮಾಂಸ ಖರೀದಿ ಮಾಡುವಂತೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುಗಾದಿ ಹಬ್ಬಕ್ಕೆ ಹರಿದ ಸೀರೆ ಹಂಚಿದ್ರಾ ಕಾಂಗ್ರೆಸ್ ಶಾಸಕ?
Advertisement
ಹಿಂದೂ ಜನಜಾಗೃತಿ ವೇದಿಕೆಯ ಮೋಹನ್ ಗೌಡ, ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಶ್ರೀರಾಮಸೇನೆ, ಹಿಂದೂ ದಲಿತ ಸೇನೆ, ಹಿಂದೂ ಜನಜಾಗೃತಿ, ರಾಷ್ಟ್ರ ರಕ್ಷಣಾ ಪಡೆ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಡಿನೋಟಿಫಿಕೇಶನ್ ಕೇಸ್ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್ ವಿಚಾರಣೆಗೆ ಎಚ್‌ಡಿಕೆ ಗೈರು
Advertisement