ನವದೆಹಲಿ: ಉದ್ದ ತಲೆ ಕೂದಲು (Haircut) ಮತ್ತು ಗಡ್ಡ (Beard) ಬಿಡುವ ಮೂಲಕ ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ತಮ್ಮ ಲುಕ್ ಬದಲಿಸಿದ್ದಾರೆ. ಕೇಂಬ್ರಿಡ್ಜ್ (Cambridge) ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಿರುವ ಅವರು ಹೊಸ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ್ ಜೋಡೊ ಯಾತ್ರೆ ಬಳಿಕವೂ ಗಡ್ಡ, ಕೂದಲಿನ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ರಾಹುಲ್ ಗಾಂಧಿ ಲಂಡನ್‌ಗೆ ತೆರಳುವ ಮುನ್ನ ಕತ್ತರಿ ಹಾಕಿದ್ದಾರೆ. ಕಟ್ಟಿಂಗ್ ಜೊತೆಗೆ ಗಡ್ಡವನ್ನು ಟ್ರೀಮ್ ಮಾಡಿದ್ದು ಮತ್ತದೇ ಅವರ ಹ್ಯಾಂಡಸಮ್ ಲುಕ್‌ಗೆ ಮರಳಿದ್ದಾರೆ.
Advertisement
राहुल गांधी कैंब्रिज यूनिवर्सिटी में – #NewLook pic.twitter.com/Hu7jLdRmDK
— Sandeep Singh (@ActivistSandeep) March 1, 2023
Advertisement
ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಫೆಲೋ ಭಾಗಿಯಾಗಿದ್ದು ‘Learning to listen in the 21st century’ ಕುರಿತು ಉಪನ್ಯಾಸ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ, ಎರಡು ವಿಭಿನ್ನ ಸಿದ್ಧಾಂತಗಳು ಮತ್ತು ಜಾಗತಿಕ ಸಂಭಾಷಣೆ ಕಡ್ಡಾಯ ಎನ್ನುವ ಮೂರು ವಿಷಯಗಳ ಮೇಲೆ ಅವರು ಉಪನ್ಯಾಸವನ್ನು ಕೇಂದ್ರಿಕರಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಮುಷ್ಕರದಿಂದ ಜನರಿಗೆ ತೊಂದರೆಯಾದರೆ ನೌಕರರಿಗೆ ಒಳ್ಳೆಯದಾಗುವುದಿಲ್ಲ- ಈಶ್ವರಪ್ಪ
Advertisement
Rahul Gandhi ji trims off his beard, finally. @RahulGandhi #RahulGandhi pic.twitter.com/YsHkjoeGiN
— Sundar IYC (@sundar_iyc) March 1, 2023
Advertisement
ಒಂದು ವಾರದ ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮತ್ತು ಮಾ. 5ರಂದು ಲಂಡನ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಲಂಡನ್‌ನಲ್ಲಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಸದಸ್ಯರನ್ನು ಭೇಟಿಯಾಗಲಿದ್ದಾರೆ. ತದನಂತರ ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ ಸರಣಿ ಸಂವಾದ ನಡೆಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದನ್ನೂ ಓದಿ: ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಬಿಜೆಪಿ ಸೇರ್ಪಡೆ