ಕೂದಲು ತುಂಬಾ ಉದ್ದವಾಗಿ ಇರಬೇಕು, ದಪ್ಪವಾಗಿ ಅಂತೆಲ್ಲ ಆಸೆ ಇರುತ್ತದೆ. ನಮ್ಮ ಸುಂದರ ಕೂದಲಿಗೆ ಮನೆಯಲ್ಲಿಯೇ ಕೆಲ ಎಣ್ಣೆಗಳನ್ನು ತಯಾರಿಸಬಹುದು. ಕೂದಲಿಗೆ ಎಣ್ಣೆ ಹಾಕುವುದು ಎಲ್ಲಾ ಸತ್ತ ಕೂದಲಿನ ಕೋಶಗಳನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಎಣ್ಣೆಯನ್ನು ಹಚ್ಚುವುದರಿಂದ ಕೂದಲನ್ನು ಬೇರುಗಳಿಂದ ತುದಿಯವರೆಗೆ ಬಲಪಡಿಸುತ್ತದೆ. ಆದ್ದರಿಂದ ಎಣ್ಣೆಗೆ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಕೂದಲ ಆರೋಗ್ಯವನ್ನು ಹೆಚ್ಚಿಸುವುದು ಹೇಗೆಂದು ನೋಡೋಣ.
ಈರುಳ್ಳಿ ಎಣ್ಣೆ: ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ತೆಗೆದಿಟ್ಟುಕೊಳ್ಳಿ. ಈ ಎರಡನ್ನೂ ಚೆನ್ನಾಗಿ ಪೇಸ್ಟ್ ಮಾಡಿ. ಕಡಿಮೆ ಉರಿಯಲ್ಲಿ, ಕೊಬ್ಬರಿ ಎಣ್ಣೆಗೆ ಈ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 5-10 ನಿಮಿಷಗಳ ನಂತರ, ಉರಿ ಹೆಚ್ಚಿಸಿ. ಈ ಮಿಶ್ರಣವನ್ನು ಕುದಿಯಲು ಬಿಡಿ. ಈ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ, ಎಣ್ಣೆಯನ್ನು ಸೋಸಿ, ಸೂಕ್ತವಾದ ಡಬ್ಬಿಯಲ್ಲಿ ಸಂಗ್ರಹಿ ನಿಮ್ಮ ಕೂದಲಿಗೆ ಹಚ್ಚುತ್ತಾ ಬನ್ನಿ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ
ದಾಸವಾಳ ಎಣ್ಣೆ: ದಾಸವಾಳ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ನಂತರ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಚನ್ನಾಗಿ ಕಾಯಿಸಿ, ಎಣ್ಣೆ ಕಾದ ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮತ್ತೆ ಚನ್ನಾಗಿ ಕುದಿಸಿದರೆ ದಾಸವಾಳದ ಎಣ್ಣೆ ರೆಡಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
ನೆಲ್ಲಿಕಾಯಿ ಎಣ್ಣೆ: ಒಣಗಿದ ನೆಲ್ಲಿಕಾಯಿ ತೆಗೆದುಕೊಂಡು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿ, ನಂತರ ಸೋಸಿಕೊಳ್ಳಿ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್
ಪುದೀನಾ ಎಣ್ಣೆ: ಕೆಲವು ಪುದೀನಾ ಎಲೆಗಳನ್ನು ಪುಡಿಮಾಡಿ. ಬಾದಾಮಿ ಎಣ್ಣೆಯೊಂದಿಗೆ ಪಾತ್ರೆಯಲ್ಲಿ ಪುಡಿಮಾಡಿದ ಎಲೆಗಳನ್ನು ಹಾಕಿ, ಎರಡು ಮೂರು ದಿನಗಳವರೆಗೆ ಸೂರ್ಯನ ಕೆಳಗೆ ಬಿಡಿ. ಎಣ್ಣೆಯನ್ನು ಸೋಸಿಕೊಳ್ಳಿ ಮತ್ತು ಬಳಸಿ.