ಇಸ್ಲಾಮಾಬಾದ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ಹೇರ್ ಡ್ರೈಯರ್ (Hair Dryer) ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL) ಈಗ ಟ್ರೋಲ್ ಆಗುತ್ತಿದೆ.
ಏಪ್ರಿಲ್ 11 ರಿಂದ ಪಿಎಸ್‌ಎಲ್ ಆರಂಭವಾಗಿದ್ದು ಮುಲ್ತಾನ್ ಸುಲ್ತಾನ್ (Multan Sultans) ವಿರುದ್ಧ ಕರಾಚಿ ಕಿಂಗ್ಸ್ (Karachi Kings) ರೋಚಕ ಜಯ ಸಾಧಿಸಿತ್ತು.
ಮೊದಲು ಬ್ಯಾಟ್ ಮಾಡಿದ್ದ ಮುಲ್ತಾನ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 234 ರನ್ ಹೊಡೆಯಿತು. ಸವಾಲಿನ ಮೊತ್ತ ಇದ್ದರೂ ಕರಾಚಿ ಕಿಂಗ್ಸ್ 19.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 236 ರನ್ ಹೊಡೆದು ಜಯಗಳಿಸಿತು.
James Vince is the Dawlance Reliable Player of the Match for his game-changing performance against the Multan Sultans! 💙❤️#YehHaiKarachi | #KingsSquad | #KarachiKings pic.twitter.com/PH2U9FQl5a
— Karachi Kings (@KarachiKingsARY) April 13, 2025
ಈ ಪಂದ್ಯದಲ್ಲಿ ಜೇಮ್ಸ್ ವಿನ್ಸ್ (James Vince ) ಅವರು 43 ಎಸೆತಗಳಲ್ಲಿ 101 ರನ್(14 ಬೌಂಡರಿ, 4 ಸಿಕ್ಸ್) ಹೊಡೆದು ಜಯಗಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಈ ವಿಶೇಷ ಸಾಧನೆಗೆ ಅರ್ಹವಾಗಿಯೇ ವಿನ್ಸ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ವಿನ್ಸ್ ಅವರಿಗೆ ಹೇರ್ ಡ್ರೈಯರ್ ನೀಡಲಾಯಿತು. ಹೇರ್ ಡ್ರೈಯರ್ ನೀಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.