ಬೆಂಗಳೂರು: ದೇಶದಲ್ಲಿ ಹೆಚ್3ಎನ್2 ವೈರಸ್ (H3N2 virus) ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಕೋವಿಡ್ (Covid) ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ ಆರಂಭವಾಗಿದೆ. ಈ ವಿಚಾರದ ಬಗ್ಗೆ ತಜ್ಞರ ಜೊತೆಗೆ ಮಾರ್ಚ್ 6ರಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ
ಕೋವಿಡ್ ಎನ್ನುವ ಮಹಾಮಾರಿ ರಾಜ್ಯ ಬಿಟ್ಟು ಬಹುತೇಕ ತೊಲಗಿದೆ. ಆದರೆ ಈಗ ಹೆಚ್3ಎನ್2 ರೂಪದಲ್ಲಿ ಮತ್ತೊಂದು ವೈರಸ್ ದೇಶದ ಜನರಿಗೆ ಕಂಟಕವಾಗಿ ಕಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆಗೆ ಕೇಂದ್ರದಿಂದ ಸಂದೇಶ ರವಾನೆಯಾಗಿದೆ. ಇದನ್ನೂ ಓದಿ: ವಿರಾಟ್ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು – ಕೊಹ್ಲಿಯನ್ನು ಹೊಗಳಿ ಸಚಿನ್ ವಿರುದ್ಧ ಅಖ್ತರ್ ಟೀಕೆ
ಆರೋಗ್ಯ ಇಲಾಖೆಯಿಂದ ಹೆಚ್3ಎನ್2 ವೈರಸ್ ಗಂಭೀರತೆ ಮತ್ತು ಪರಿಣಾಮದ ಬಗ್ಗೆ ಸೋಮವಾರ ಮಹತ್ವದ ಸಭೆ ನಡೆಯಲಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ (Dr. Sudhakar K) ನೇತೃತ್ವದಲ್ಲಿ ತಜ್ಞರ ಜೊತೆಗೆ ಸಭೆ ನಡೆಯಲಿದೆ. ವೈರಸ್ ತಡೆಗೆ ಹಾಗೂ ಚಿಕಿತ್ಸೆ ವಿಧಾನದ ಬಗ್ಗೆ ಸಚಿವರು ಮಾಹಿತಿ ನೀಡಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಈ ಕುರಿತು ಗಮನ ಕೊಡುವಂತೆ ತಿಳಿಸಿರುವುದರಿಂದ ಹೆಚ್ಚಿನ ನಿಗಾವಹಿಸುವುದು ಅತೀ ಅಗತ್ಯ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – 13 ವರ್ಷದ ಬಾಲಕ ಸಾವು
ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ ಸಮಸ್ಯೆ ಕೂಡ ಕಂಡು ಬರಬಹುದು. ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ
ಸುರಕ್ಷತೆ ಹೇಗಿರಬೇಕು?
ಸೋಪು, ನೀರು ಬಳಸಿ ಆಗಾಗ ಕೈಗಳನ್ನ ತೊಳೆಯಬೇಕು. ಮಾಸ್ಕ್ ಧರಿಸಿ. ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ. ಪದೇ ಪದೇ ಮೂಗು, ಬಾಯಿ ಮುಟ್ಟಬೇಡಿ. ನೀರು ಜಾಸ್ತಿ ಸೇವಿಸಿ. ಜ್ವರ, ಮೈಕೈ ನೋವು ಇದ್ದರೆ ನಿರ್ಲಕ್ಷ್ಯ ಮಾಡದೇ ವೈದ್ಯರ ತಪಾಸಣೆ ಮಾಡಿಸಿ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ
ಹೆಚ್3ಎನ್2 ಮಾರಣಾಂತಿಕ ರೋಗವಲ್ಲ. ಆದರೂ ರೋಗದ ಲಕ್ಷಣಗಳು ದೀರ್ಘಕಾಲದವರೆಗೆ ಸೋಂಕಿತರನ್ನು ಕಾಡಲಿದೆ. ಹಾಗಾಗಿ ಈ ಸೋಂಕು ಬೇರೆ ರೀತಿ ಪರಿಣಾಮ ಪಡೆದುಕೊಂಡು ಪ್ರತಿಕೂಲ ಪರಿಣಾಮ ಬೀರುವ ಮುನ್ನ ಎಚ್ಚೆತ್ತುಕೊಳ್ಳುವುದು ಅತೀ ಅವಶ್ಯ. ಜೊತೆಗೆ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್ (Guidelines) ಕೂಡ ಬಿಡುಗಡೆ ಆಗಲಿದ್ದು ಅದನ್ನು ಫಾಲೋ ಮಾಡಲೇಬೇಕಾಗಿರುವುದು ಅನಿವಾರ್ಯವಾಗಿದೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ