ಬೀದರ್: ಮನೆಯೊಂದರಲ್ಲಿ ಮಾರುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ಬ್ರಾಂಡೆಡ್ ಮದ್ಯದ (Liquor) ಬಾಟಲಿಗಳನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.
Advertisement
ರೌಡಿ ನಿಗ್ರಹ ದಳ (Anti Rowdy Squad) ಹಾಗೂ ಗಾಂಧಿಗಂಜ್ (Gandhiganj) ಪೊಲೀಸರು ಖಚಿತ ಮಾಹಿತಿ ಮೇರೆಗೆ ರಾಮನಗರ ಕಾಲೋನಿಯ (Ramnagar Colony) ಆರೋಪಿ ರಾಜಕುಮಾರ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 4 ಲಕ್ಷ ರೂ. ಮೌಲ್ಯದ ಬ್ಲಾಕ್ ಡಾಗ್, ಬ್ಲಾಕ್ ಅಂಡ್ ವೈಟ್, 100 ಪೈಪರ್ ಸೇರಿದಂತೆ ಹಲವಾರು ಬ್ರಾಂಡೆಡ್ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
Advertisement
ಈ ಸಂಬಂಧ ಗಾಂಧಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ