ಬೆಂಗಳೂರು: ವಿಧಾನ ಪರಿಷತ್ ಮೂರು ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್ 2 ಇಬ್ಬರು ಹಾಗೂ ಜೆಡಿಎಸ್ ಪಕ್ಷದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿದ್ದಾರೆ. ಈ ನಡುವೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಅವರು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಸದ್ಯಸ ಸ್ಥಾನಕ್ಕೆ ತಾವು ಸೂಚಿಸಿರುವ ಅಭ್ಯರ್ಥಿಗಳ ಹೆಸರನ್ನು ಪರಿಗಣಿಸಿಲ್ಲ ಎನ್ನುವುದು ವಿಶ್ವನಾಥ್ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಪರಿಷತ್ ಅಭ್ಯರ್ಥಿ ಆಯ್ಕೆ ರಾಜ್ಯಾಧ್ಯಕ್ಷನ ಮಾತಿಗೆ ಬೆಲೆ ಇಲ್ಲ. ರಮೇಶ್ ಬಾಬು, ವೈಎಸ್ ವಿ ದತ್ತ, ಕೋನರೆಡ್ಡಿ ಹಿರಿಯರು. ಪರಿಷತ್ ನಲ್ಲಿ ಯಾವುದೇ ವಿಷಯದ ಮೇಲೆ ಅವರಿಗೆ ಮಾತನಾಡುವ ಅರ್ಹತೆ ಇದ್ದವರು. ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಬಹುದಿತ್ತು. ಪಕ್ಷದ ಹಲವು ನಾಯಕರೆಲ್ಲ ಸೇರಿ ಶಿಫಾರಸ್ಸು ಮಾಡಿದರೂ ಬೆಲೆ ಇಲ್ಲ ಎಂದು ಪಕ್ಷದ ವರಿಷ್ಠರ ನಡೆಗೆ ವಿಶ್ವನಾಥ್ ಆಪ್ತರಲ್ಲಿ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿದೆ.
Advertisement
Advertisement
ಜೆಡಿಎಸ್ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಯಾವುದೇ ನಾಯಕರಿಲ್ಲದೆ ರೇವಣ್ಣ ಅವರ ಆಪ್ತ ಸಹಾಯಕರೊಂದಿಗೆ ವಿಧಾನಸಭೆಗೆ ಆಗಮಿಸಿದ ರಮೇಶ್ ಗೌಡ ಅವರು ಚುನಾವಣಾಧಿಕಾರಿ ಎಂ.ಎಸ್.ಕುಮಾರಸ್ವಾಮಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಸಿಎಂ ಎಚ್‍ಡಿ ಕುಮಾರಸ್ವಾಮಿ, ಸಚಿವ ಎಚ್‍ಡಿ ರೇವಣ್ಣ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದದಿಂದ ನಾನು ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾಮಪತ್ರದಲ್ಲಿ ಸೂಚಕರಾಗಿ 10 ಜನ ಶಾಸಕರು ಸಹಿ ಮಾಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಕಾಂಗ್ರೆಸ್ ಪಕ್ಷದಿಂದ ನಸೀರ್ ಅಹಮ್ಮದ್ ಹಾಗೂ ಎಂ ಸಿ ವೇಣುಗೋಪಾಲ್ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಹೆಚ್. ಎಂ. ರಮೇಶಗೌಡ, ಹರಿಶ್ಚಂದ್ರ, ವೆಂಕಟೇಶ್ವರ್ ಮಹಾಸ್ವಾಮೀಜಿ ಉರೂಫ್ ಕಟಕದೊಂಡ ಸೇರಿದಂತೆ ಮೂವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಜಂಟಿ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಎಸ್ ಕುಮಾರಸ್ವಾಮಿ ಅವರು, ಪರಿಷತ್ ಗೆ ಖಾಲಿ ಇರುವ ಮೂರು ಸ್ಥಾನಗಳ ಚುನಾವಣೆಗೆ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿವೆ. ನಾಳೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಸೆಪ್ಟೆಂಬರ್ 27 ರ ಬಳಿಕ ಅಭ್ಯರ್ಥಿ ಆಯ್ಕೆ ಪ್ರಕಟವಾಗಲಿದೆ ಎಂದು ತಿಳಿಸಿದರು.
ಪಕ್ಷೇತರ ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳಲ್ಲಿ ಶಾಸಕರ ಸಹಿ ಇಲ್ಲದ ಕಾರಣ ಬಹುತೇಕ ತಿರಸ್ಕರಗೊಳ್ಳಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುವ ಎರಡು ಸ್ಥಾನಗಳಿಗೆ ಎಂ.ಸಿ. ವೇಣುಗೋಪಾಲ್ ಹಾಗೂ ನಜೀರ್ ಅಹಮದ್ ಅವರು ಇಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಸಮಯದಲ್ಲಿ @eshwar_khandre @DrParameshwara @krishnabgowda @KhMuniyappa Dr. SyedNasir ಹಾಗೂ ಇತರ ನಾಯಕರು ಹಾಜರಿದ್ದರು. pic.twitter.com/kCv3Wr7sUQ
— Karnataka Congress (@INCKarnataka) September 24, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv