– ಸಮ್ಮಿಶ್ರ ಸರ್ಕಾರದಲ್ಲಿ 7 ಜನ ಮಂತ್ರಿಗಳು ಹೆಚ್‍ಡಿಕೆ ಕುಟುಂಬದವರೆ
ಬೆಂಗಳೂರು: ಸತ್ಯಹರಿಶ್ಚಂದ್ರ ಸತ್ತ ಮೇಲೆ ರಾಜ್ಯದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರಿದ್ದಾರೆ. ಒಬ್ಬರು ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಇಬ್ಬೊಬ್ಬರು ಬಸವರಾಜ ಬೊಮ್ಮಾಯಿ (Basavaraj Bommai) ಎಂದು ವಿಧಾನ ಪರಿಷತ್ತು ಸದಸ್ಯ ಹೆಚ್.ವಿಶ್ವನಾಥ್ (H.Vishwanath) ವ್ಯಂಗ್ಯವಾಡಿದ್ದಾರೆ.
Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಇಬ್ಬರೂ ಮುಖ್ಯಮಂತ್ರಿ ಆಗಿದ್ದವರು. ಆಗ ಮಾಡಿದ ಅದ್ವಾನಗಳನ್ನು ಜನ ಈಗಲೂ ಅನುಭವಿಸುತ್ತಿದ್ದಾರೆ. ಅವರು ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು. ಕುಮಾರಸ್ವಾಮಿಯವರೇ ಈಗ ಆ ಪೆನ್‍ಡ್ರೈವ್ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ
Advertisement
Advertisement
ಕುಮಾರಸ್ವಾಮಿಯವರು ಸುಮ್ಮನೆ ಏನೇನೋ ಆರೋಪ ಮಾಡುತ್ತಾರೆ. ಆದರೆ ಯಾವುದನ್ನು ಸಾಬೀತು ಮಾಡಿದ್ದಾರೆ? ಅವರು ಸಹ ಮುಖ್ಯಮಂತ್ರಿ ಆಗಿದ್ದವರು. ಅವರು ಆಡುವ ಮಾತಿನಿಂದ ಅವರದ್ದೇ ಘನತೆ ಕಡಿಮೆ ಆಗುತ್ತಿದೆ. ಅಗತ್ಯ ಇರುವ ಕಡೆಗೆ ಅನುದಾನ ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ. ಅದನ್ನೇ ಬಿಜೆಪಿ ಹಾಗೂ ಜೆಡಿಎಸ್‍ನವರು ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.
Advertisement
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ದಲಿತರಿಗೆ ಏನು ಮಾಡಿದ್ದರು? ನಾನೂ ಸಹ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‍ಗೆ 12 ಸಚಿವ ಸ್ಥಾನ ಸಿಕ್ಕಿತ್ತು. ಇದರಲ್ಲಿ 7 ಸಚಿವರು ಕುಮಾರಸ್ವಾಮಿ ಮನೆಯವರೇ ಆಗಿದ್ದರು. ಬಂಡೆಪ್ಪ ಕಾಶೆಂಪೂರ್ ಒಬ್ಬ ಕುರುಬ, ಇನ್ನಿಬ್ಬರು ಲಿಂಗಾಯತರು ಮಂತ್ರಿಗಳಾಗಿದ್ದರು. ಎರಡು ಸಚಿವ ಸ್ಥಾನ ಹಾಗೇ ಖಾಲಿಯೇ ಇತ್ತು. ದಲಿತರು ಹಾಗೂ ಮುಸ್ಲಿಮರಿಗೆ ಕೊಡಿ ಎಂದು ನಾನು ಕೇಳಿದ್ದೆ. ಆ ಸ್ಥಾನಗಳನ್ನು ಖಾಲಿ ಬಿಟ್ಟರೇ ಹೊರತು ದಲಿತರಿಗೆ ಸಚಿವ ಸ್ಥಾನ ಸಿಗಲಿಲ್ಲ. ಈಗ ದಲಿತರ ಉದ್ಧಾರದ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದ್ದಾರೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೇಳುವ ಬಗ್ಗೆ ಯೋಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ನೋಡಬೇಕು. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪ ಆಗಿದೆ ಅದು ಒಳ್ಳೆಯದೆ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಏನು ತೀರ್ಮಾನ ಮಾಡಲಿದೆ ನೋಡಬೇಕು ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಜನ್ಮದಲ್ಲೂ ಅಂತಹ ತಮ್ಮ ಬೇಡ- ಡಿಕೆಶಿಗೆ ಹೆಚ್‍ಡಿಕೆ ಟಾಂಗ್
Web Stories