ರಾಯಚೂರು : ಮುಖ್ಯಮಂತ್ರಿ ಯಡಿಯೂರಪ್ಪರನ್ನ ಒಮ್ಮೆ ಹಾಡಿ ಹೊಗಳಿದ ಮಾಜಿ ಶಾಸಕ ಹೆಚ್.ವಿಶ್ವನಾಥ್, ಇನ್ನೊಮ್ಮೆ ಇವತ್ತು ಸೋಮವಾರ. ನಾಳೆ, ನಾಡಿದ್ದು ಏನಾಗುತ್ತೆ ಅಂತ ಈಗಲೇ ಹೇಗೆ ಹೇಳಲಿ ಅನ್ನೋ ಮೂಲಕ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು. ರಾಯಚೂರಿನ ದೇವದುರ್ಗದ ತಿಂಥಿಣಿ ಬಳಿಯ ಕಾಗಿನೆಲೆ ಗುರುಪೀಠದಲ್ಲಿ ಆಯೋಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಹೆಚ್.ವಿಶ್ವನಾಥ್ ಮಾತನಾಡಿದರು.
Advertisement
ವೇದಿಕೆಯ ಮೇಲೆ ಮಾತನಾಡಿದ ವಿಶ್ವನಾಥ್ ಯಡಿಯೂರಪ್ಪ ನಾಲಿಗೆ ಮೇಲೆ ನಿಂತ ನಾಯಕ, ಕೊಟ್ಟ ಮಾತನ್ನ ಉಳಿಸಿಕೊಳ್ಳುವ ನಿಯತ್ತಿನ ನಾಯಕ. ನಾಲ್ಕನೇ ಬಾರಿಗೆ ಬಿಎಸ್ ವೈ ಮುಖ್ಯಮಂತ್ರಿಯಾಗಲು ಹಾಲುಮತ ಸಮಾಜದ ಮುಖ್ಯ ಪಾತ್ರವೂ ಇದೆ. ಹಾಲುಮತ ಸಮಾಜದ ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಶಂಕರ್, ಬೈರತಿ ಬಸವರಾಜ್ ಸೇರಿ ಹಲವು ನಾಯಕರು ಬಿಎಸ್ ವೈ ಜೊತೆ ಇದ್ದೇವೆ. ಹಾಲುಮತ ಸಮಾಜದಿಂದ ಬಂದ ನಾಲ್ಕು ಜನ ಶಾಸಕರು ನಮ್ಮ ಸ್ಥಾನ ತೊರೆದು ಅವರ ಬೆನ್ನ ಹಿಂದೆ ನಿಂತಿದ್ದೇವೆ ಅಂತ ಹೇಳಿ ಯಡಿಯೂರಪ್ಪನವರನ್ನ ಹಾಡಿ ಹೊಗಳಿದರು.
Advertisement
ವೇದಿಕೆಯಿಂದ ಸಿಎಂ ತೆರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್, ಮುಖ್ಯಮಂತ್ರಿಗಳು ಏನೇ ಹೇಳಿದ್ರು ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ. ಒಂದು ವೇಳೆ ಕೊಡದೇ ಇದ್ರೆ ಮುಂದೆ ಕಾದು ನೋಡುತ್ತೆವೆ. ಇವತ್ತು ಸೋಮವಾರ ನಾಳೆ ನಾಡಿದ್ದು ಏನಾಗುತ್ತೆ ಅಂತ ಈಗಲೇ ಹೇಗೆ ಹೇಳಲಿ. ಬಿಎಸ್ ವೈ ಸಿಎಂ ಆಗಲು 17 ಜನ ತ್ಯಾಗ ಮಾಡಿದ್ದೇವೆ. ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಅಂತ ವಿಶ್ವನಾಥ್ ಹೇಳಿದರು.
Advertisement
Advertisement
ಇದಕ್ಕೂ ಮುನ್ನ 17 ಜನರಿಗೂ ಸಚಿವ ಸ್ಥಾನ ಕೊಡಬೇಕು ಅಂತ ನಿನ್ನೆ ಹೆಚ್.ವಿಶ್ವನಾಥ್ ರಾಯಚೂರಿನಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಎಸ್ ಯಡಿಯೂರಪ್ಪ, ಯಾರ್ ಯಾರೋ ಹೇಳಿದ್ದಕ್ಕೆ ಸಚಿವ ಸ್ಥಾನ ಕೊಡಲು ಆಗಲ್ಲ ಅಮಿತ್ ಶಾ ನಿರ್ಧಾರವೇ ಅಂತಿಮ ಅಂತ ಹೇಳಿದ್ದರು.