ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 17 ಜನರಲ್ಲಿ ಒಬ್ಬರಾದ ಹೆಚ್.ವಿಶ್ವನಾಥ್ ಗೆ ಸರ್ಕಾರ ಶಾಕ್ ನೀಡಿದೆ. ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿದ್ದ ರಮೇಂದ್ರ ಅವರನ್ನ ಅಲ್ಲಿಂದ ಎತ್ತಂಗಡಿ ಮಾಡಲಾಗಿದೆ. ರಮೇಂದ್ರರಿಂದ ತೆರವಾದ ಜಾಗಕ್ಕೆ ಸಿಎಂ ಆಪ್ತ ಶಿವಯೋಗಿ ಹಿರೇಮಠ್ ವರ್ಗಾಯಿಸಲಾಗಿದೆ.
Advertisement
ತಮ್ಮ ಅಳಿಯನಿಗೆ ಸ್ಥಾನಮಾನ ಕೊಡಿಸಲು ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ವಿಶ್ವನಾಥ್ ಸಾಕಷ್ಟು ಶ್ರಮಿಸಿದ್ದರು. ಅದೇ ವಿಷಯವಾಗಿ ಸಿಎಂ ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ದೂರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಪರೇಷನ್ ಕಮಲಕ್ಕೆ ಒಳಗಾದ ವಿಶ್ಚನಾಥ್ ಗೆ ತಮ್ಮ ಪಕ್ಷದ ಮುಖಂಡರ ಮೇಲೆ ಅಸಮಾಧಾನ ಹೊಂದಲು ಎಷ್ಟೆ ಮನವಿ ಮಾಡಿದರು ಅಳಿಯನಿಗೆ ಸೂಕ್ತ ಸ್ಥಾನಮಾನ ನೀಡಲಿಲ್ಲ ಎಂಬ ಬೇಸರ ಸಹಾ ಕಾರಣವಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಯಡಿಯೂರಪ್ಪನವರ ಮೇಲೆ ಒತ್ತಡ ತಂದು ತಮ್ಮ ಅಳಿಯನಿಗೆ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜೀನಿಯರ್ ಆಗಿ ಹೆಚ್ಚುವರಿ ಹುದ್ದೆ ಕೊಡಿಸುವಲ್ಲಿ ವಿಶ್ವನಾಥ್ ಯಶಸ್ವಿಯಾಗಿದ್ದರು.
Advertisement
ಆದರೆ ನಾಲ್ಕು ತಿಂಗಳ ನಂತರ ರಮೇಂದ್ರ ಅವರನ್ನ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜೀನಿಯರ್ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯಿಂದ ತೆರವುಗೊಳಿಸಲಾಗಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ವಿಶ್ವನಾಥ್ ಗೆ ಅಳಿಯನ ವರ್ಗಾವಣೆ ಶಾಕ್ ಎದುರಾಗಿದೆ.