Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಲ್ಲಿದ್ದ ಡಿಸಿ ಒಬ್ಬ ಕಳ್ಳ; ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾನೆ – ಏಕವಚನದಲ್ಲಿ ಹೆಚ್‌.ಡಿ.ರೇವಣ್ಣ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Hassan | ಇಲ್ಲಿದ್ದ ಡಿಸಿ ಒಬ್ಬ ಕಳ್ಳ; ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾನೆ – ಏಕವಚನದಲ್ಲಿ ಹೆಚ್‌.ಡಿ.ರೇವಣ್ಣ ಕಿಡಿ

Hassan

ಇಲ್ಲಿದ್ದ ಡಿಸಿ ಒಬ್ಬ ಕಳ್ಳ; ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾನೆ – ಏಕವಚನದಲ್ಲಿ ಹೆಚ್‌.ಡಿ.ರೇವಣ್ಣ ಕಿಡಿ

Public TV
Last updated: September 8, 2022 6:46 pm
Public TV
Share
2 Min Read
h.d.revanna
SHARE

ಹಾಸನ: ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಯಲು ಹುನ್ನಾರ ನಡೆಸುತ್ತಿದ್ದು, ಈ ಹಿಂದೆ ಇದ್ದ ಡಿಸಿ ಒಬ್ಬ‌ ಕಳ್ಳ ಎಂದು ಮಾಜಿ ಸಚಿವ ಹೆಚ್.ಡಿ‌.ರೇವಣ್ಣ ಹರಿಹಾಯ್ದಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಯಲು ಹುನ್ನಾರ ನಡೆಸುತ್ತಿದ್ದಾರೆ. ಹಿಂದಿನ ಡಿಸಿ ಹಾಗೂ ಶಾಸಕರು ಅದು ಫಲವತ್ತಾದ ಭೂಮಿ. ಅಷ್ಟು ಜಾಗ ಅವಶ್ಯಕತೆ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಸನದಲ್ಲಿದ್ದ ಡಿಸಿಯೊಬ್ಬ ಕಳ್ಳ, ಈಗ ಬೆಂಗಳೂರಿಗೆ ಹೋಗಿದ್ದಾನೆ. ನನ್ನ ಕೈಗೆ ಸಿಗದೆ ಎಲ್ಲೂ ಹೋಗಲ್ಲ ಅವನು. ಇಲ್ಲಿ 11 ಎಕರೆ ಜಾಗ ನುಂಗಿ 250 ಎಕರೆ ಹೊಡೆಯಲು ಹೊರಟಿದ್ದಾನೆ. ಕರಾಬ್ ಡಿಸಿ ಆತ. ಅವನನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಿದವರಿಗೆ ಅವಾರ್ಡ್ ಕೊಡಬೇಕು. ಜಿಲ್ಲೆಗೆ ಅತಿ ಹೆಚ್ಚು ಬಾರ್ ಲೈಸೆನ್ಸ್ ಕೊಟ್ಟಿದ್ದು, ಒಂದು ಲೈಸೆನ್ಸ್‌ಗೆ ಅವರು ಐವತ್ತು ಲಕ್ಷ ಲಂಚ ಪಡೆದಿದ್ದಾರೆ. ಈಗ ಇವನನ್ನು ಬೆಂಗಳೂರಿನ ಕೆಐಎಡಿಬಿಯಲ್ಲಿ ಫಲವತ್ತಾದ ಜಾಗದಲ್ಲಿ ಕೂರಿಸಿದ್ದಾರೆ ಎಂದು ನಿರ್ಗಮಿತ ಜಿಲ್ಲಾಧಿಕಾರಿಯೊಬ್ಬರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಫೇಕ್ ಇಶ್ಯು ಕ್ರಿಯೇಟ್ ಮಾಡ್ತಿದ್ದಾರೆ- ದೋಸೆ ವಿವಾದಕ್ಕೆ ಸೂರ್ಯ ಸ್ಪಷ್ಟನೆ

preetham gowda

ಹಾಸನಕ್ಕೆ ವಿಮಾನ ನಿಲ್ದಾಣ ತಂದಿದ್ದು ನನ್ನ ಐಡಿಯಾಲಜಿ. ಜಿಲ್ಲಾ ಕೇಂದ್ರದಲ್ಲಿ ಲೂಟಿ ನಡೆಯುತ್ತಿದೆ. ಇದು ಲೂಟಿ ಹೊಡೆಯುವವರ ಐಡಿಯಾಲಜಿ ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.

ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಾಣವಾದರೆ 6,500 ಜನರಿಗೆ ಉದ್ಯೋಗ ಸಿಗುತ್ತಿತ್ತು. ಇದನ್ನು ನಿಲ್ಲಿಸಿ ಹೊಸದಾಗಿ ವಿಮಾನ ನಿಲ್ದಾಣ ಮಾಡುತ್ತಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಗುತ್ತಿಗೆದಾರನಿಗೆ ಹೇಳಿದ್ದೇನೆ. ಆ ಕಳ್ಳ ಹೋದ್ನಲ್ಲ ಅವನು, ನಾಚಿಕೆ ಮರ್ಯಾದೆ ಇಲ್ಲ. ಅವನ ಜೊತೆ ಸೇರಿಕೊಂಡು ಇವನು ಅಷ್ಟು ಭೂಮಿ ಅವಶ್ಯಕತೆ ಇಲ್ಲ ಎಂದು ಪತ್ರ ಬರೆಯುತ್ತಾನೆ ಎಂದು ಶಾಸಕರ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಬಗ್ಗೆ ಬಿಗ್‍ ಬುಲೆಟಿನ್‍ನಲ್ಲಿ ಪ್ರಸ್ತಾಪ – ಸಿದ್ದರಾಮಯ್ಯ ಪ್ರಶಂಸೆ

ಇಷ್ಟು ದೊಡ್ಡ ವಿಮಾನ ನಿಲ್ದಾಣ ಯಾವ ಉದ್ದೇಶಕ್ಕೆ ಮಾಡಿದ್ದೇವೆ ಎಂದು ಶಾಸಕರಿಗೆ ಏನು ಗೊತ್ತಿದೆ. ಒಬ್ಬ ಮಾಜಿ ಪ್ರಧಾನಿ ಶ್ರಮವಹಿಸಿ ತಂದಿರುವ ಯೋಜನೆ ಇದು. ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ಮಾಡಲಿ. ಇಲ್ಲವಾದರೆ ಕಾಮಗಾರಿ ನಿಲ್ಲಿಸಲಿ, ಹಾಗೆ ಬಿದ್ದಿರುತ್ತೆ. ಅಧಿಕಾರಕ್ಕೆ ಬಂದಾಗ ನಾವು ಮಾಡುತ್ತೇವೆ ಎಂದರು.

ಭೂಮಾಫಿಯದವರ ಜೊತೆ ಸೇರಿಕೊಂಡು ಭೂಮಿ‌ ಕಬಳಿಸಲು ಹೊರಟಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಆರ್‌ಟಿಐನಲ್ಲಿ ಅರ್ಜಿ ಹಾಕಿದಾಗ ನನಗೆ ನಿನ್ನೆ ಗೊತ್ತಾಗಿದೆ. ಹಳೆಯ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಮುಚ್ಚಿಟ್ಟಿದ್ದು, ಗುತ್ತಿಗೆದಾರನಿಂದ ಐದು ಕೋಟಿ ಲಂಚ ಪಡೆದಿದ್ದಾರೆ. ಎಲ್ಲೆಲ್ಲಿ ಜಾಗ ಇದೆ ಆ ಜಾಗ ಕಬಳಿಸುತ್ತಿದ್ದಾರೆ. 2008 ರಿಂದ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದೇವೇಗೌಡರು ಈಗಾಗಲೇ ಪತ್ರ ಬರೆದಿದ್ದಾರೆ. ನಾನು, ಎಂಪಿ ಹಾಗೂ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

TAGGED:airporth d revannahassanjdsಜೆಡಿಎಸ್ವಿಮಾನ ನಿಲ್ದಾಣಹಾಸನಹೆಚ್‌.ಡಿ.ರೇವಣ್ಣ
Share This Article
Facebook Whatsapp Whatsapp Telegram

Cinema news

ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood

You Might Also Like

valentines day 3
Latest

Valentine’s Day – ಯಾರಿದು ಪ್ರೇಮ ಸಂತ ವ್ಯಾಲೆಂಟೈನ್?

Public TV
By Public TV
2 minutes ago
Lovers Day
Bengaluru City

Valentine’s Day | ಹೇ ಹುಡುಗಿ… ಎಳನೀರ ತೋಟಕ್ಕೆ ಕರೆದೊಯ್ದೆಯಲ್ಲ… ನೆನಪಿದೆಯಾ ನಿನ್ನ ಕಳ್ಳ ಮರೆವಿಗೆ!

Public TV
By Public TV
3 minutes ago
Pulwama Attack
Latest

ಪುಲ್ವಾಮಾ ದಾಳಿಗೆ 7 ವರ್ಷ – 2019ರ ಫೆ.14 ರಂದು ನಡೆದಿದ್ದು ಏನು?

Public TV
By Public TV
26 minutes ago
asia cup india pakistan toss
Cricket

ಭಾರತ, ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ?

Public TV
By Public TV
9 hours ago
Bengaluru Car Seize
Bengaluru City

ಬೆಂಗ್ಳೂರಿನಲ್ಲಿ ಮನಸೋ ಇಚ್ಛೆ ಮಾರ್ಪಡಿಸಿದ ಐಷಾರಾಮಿ ಕಾರು ಸೀಜ್‌

Public TV
By Public TV
9 hours ago
USA Cricket Team
Cricket

ನೆದರ್‌ಲ್ಯಾಂಡ್‌ ವಿರುದ್ಧ 93 ರನ್‌ಗಳ ಭರ್ಜರಿ ಜಯ – ವಿಶ್ವಕಪ್‌ನಲ್ಲಿ ಅಮೆರಿಕಗೆ ಮೊದಲ ಗೆಲುವು

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?