– ಎಚ್‍ಡಿಕೆಯ ಇಂದಿನ ಸ್ಥಿತಿಗೆ ರೇವಣ್ಣನೇ ಕಾರಣ
– ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕಿಡಿ
– ರೇವಣ್ಣ ಅಂದ್ರೆ ಮೋಸ
ಬಳ್ಳಾರಿ: ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಪಕ್ಷದ ನಾಲ್ವರು ನಿರ್ದೇಶಕರನ್ನೇ ಹೈಜಾಕ್ ಮಾಡಿದ್ದಾರೆ.
Advertisement
ಸರ್ಕಾರ ಇರೋವರೆಗೂ ಮೈತ್ರಿ -ದೋಸ್ತಿ ಎನ್ನುತ್ತಿದ್ದ ಜೆಡಿಎಸ್‍ನವರು ಸರ್ಕಾರ ಬೀಳುತ್ತಿದ್ದಂತೆ ಕಾಂಗ್ರೆಸ್‍ಗೆ ಕೈ ಕೊಡಲು ಮುಂದಾಗಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡುವುದಾಗಿ ಜೆಡಿಎಸ್ ನಾಯಕರು ಭರವಸೆ ನೀಡಿದ್ದರು. ಆದರೆ ಈಗ ಸರ್ಕಾರ ಬೀಳುತ್ತಿದ್ದಂತೆ ಮೈತ್ರಿ ಧರ್ಮಕ್ಕೆ ಬ್ರೇಕ್ ಹಾಕಿ ಕೆಎಂಎಫ್ ಅಧ್ಯಕ್ಷ ಸ್ಥಾನ ತಮಗೆ ಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪಟ್ಟು ಹಿಡಿದು ಕುಳಿತಿದ್ದಾರೆ.
Advertisement
Advertisement
ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಎಚ್.ಡಿ.ರೇವಣ್ಣ ಅವರ ಮಧ್ಯೆ ತ್ರೀವ ಗುದ್ದಾಟ ಶುರುವಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವನ್ನು ರೇವಣ್ಣ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಇದಕ್ಕೆ ಒಪ್ಪದ ಎಚ್.ಡಿ.ರೇವಣ್ಣ ಅವರು ಧಾರವಾಡದ ಹನಮಂತಗೌಡ ಹಿರೇಗೌಡ್ರ, ವಿಜಯಪುರದ ಶ್ರೀಶೈಲ್‍ಗೌಡ ಪಾಟೀಲ್, ಮಂಗಳೂರಿನ ಕಾಪು ದಿವಾಕರ್ ಶೆಟ್ಟಿ ಹಾಗೂ ಶಿವಮೊಗ್ಗದ ವೀರಭದ್ರಯ್ಯ ಬಾಬು ಚಲ್ಲೂರಯ್ಯ ಅವರನ್ನು ಹೈದರಾಬಾದ್ ರೆಸಾರ್ಟಿಗೆ ಕಳುಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ರೇವಣ್ಣ ಅವರ ನಡೆಯಿಂದಾಗಿ ಕಾಂಗ್ರೆಸ್ ನಾಯಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ದೋಸ್ತಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡುವಂತೆ ಕೇಳಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಕೇಳಿಬಂದಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಇಂದಿನ ಸ್ಥಿತಿಗೆ ರೇವಣ್ಣ ಕಾರಣ. ಸರ್ಕಾರ ಇದ್ದಾಗಲೇ ಎಚ್.ಡಿ.ರೇವಣ್ಣ ಅವರು ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ. ರೇವಣ್ಣ ಅಂದರೆ ಮೋಸ. ಮೋಸ ಮಾಡುವುದೇ ಎಚ್.ಡಿ.ರೇವಣ್ಣ ಕಾಯಕ ಎಂದು ಕಿಡಿಕಾರಿದರು.
ಕೆಎಂಎಫ್ ಅಧ್ಯಕ್ಷ ಸ್ಥಾನ ಕೈ ತಪ್ಪುತ್ತೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ನಮ್ಮ ಪಕ್ಷದ ನಿರ್ದೇಶಕರನ್ನು ಹೈಜಾಕ್ ಮಾಡಿದ್ದಾರೆ. ಇಂತವರು ಶಾಸಕರ ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ. ಎಚ್.ಡಿ.ರೇವಣ್ಣ ಅವರ ನಡೆಯಿಂದಲೇ ಎಂಟಿಬಿ ನಾಗರಾಜ್, ಸೋಮಶೇಖರ್, ಎಚ್.ವಿಶ್ವನಾಥ್ ಅಂತಹ ನಾಯಕರು ಸರ್ಕಾರ ವಿರುದ್ಧ ನಿಲ್ಲಬೇಕಾಯಿತು ಎಂದು ಹೇಳಿದರು.