– ಸೂಪರ್ ಸಿಎಂ ವಿರುದ್ಧ ಮಾಜಿ ಸಚಿವ ಸುರೇಶ್ ವಾಗ್ದಾಳಿ
ಬೆಂಗಳೂರು: ಬಿಸ್ಕೆಟ್ ಆಯ್ತು, ಟೋಪಿ ಆಯ್ತು, ಈಗ ಪುಟಗೋಸಿ. ಮಂತ್ರಿಗಿರಿಯನ್ನೇ ಪುಟಗೋಸಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಕರೆದಿದ್ದಾರೆ.
ಎಚ್.ಡಿ ರೇವಣ್ಣ ಅವರು ಮಂತ್ರಿಗಿರಿ ಹೇಳಿಕೆ ವಿರುದ್ಧ ಬಿಜೆಪಿಯಿಂದ ಕ್ಯಾಂಪೇನ್ ನಡೆಸಲಾಗುತ್ತಿದೆ. ರೇವಣ್ಣ ವಿರುದ್ಧ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ತಿರುಗಿಬಿದಿದ್ದಾರೆ.
Advertisement
ರೇವಣ್ಣ ಹೇಳಿಕೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ. “ಇದು ರಾಜ್ಯದ ದುರಂತ. ಮಂತ್ರಿಗಿರಿಯನ್ನು ಪುಟಗೋಸಿ ಮಾಡಿಕೊಂಡಿರುವವರು ಲೋಕೋಪಯೋಗಿ ಸಚಿವ. ಒಂದೇ ಕುಟುಂಬದಿಂದ 3 ಜನ ಪುಟಗೋಸಿಗಳು ಯಾಕೆ?” ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್, ರಾಜಕೀಯ ವ್ಯಕ್ತಿಗಳ ಬಗ್ಗೆ ಸಮಾಜದಲ್ಲಿ ಬಹಳ ಕೆಟ್ಟ ಅಭಿಪ್ರಾಯವಿದೆ. ಹೀಗಾಗಿ ರಾಜಕೀಯ ಈ ಸ್ಥಿತಿಯಲ್ಲಿರುವಾಗ ಕೆಲವೊಂದು ಮಾತುಗಳನ್ನಾಡುವಾಗ ಗಂಭೀರತೆಯನ್ನು ಅರಿತುಕೊಳ್ಳಬೇಕು. ರೇವಣ್ಣ ಅವರು ಯಾವುದೇ ಕಾರ್ಯ ಮಾಡುವಾಗ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡ ಕಾಲ ನೋಡುತ್ತಾರೆ. ಹಾಗಾದ್ರೆ ಈ ಪುಟಗೋಸಿ ಎನ್ನುವ ಮಂತ್ರಿಗಿರಿಯನ್ನು ಯಾವ ಕಾಲದಲ್ಲಿ ತೆಗೆದುಕೊಂಡ್ರು ಅಂತ ಪ್ರಶ್ನಿಸಿದ್ರು.
Advertisement
ರೇವಣ್ಣ ಅವರು ಈ ಹೇಳಿಕೆ ನೀಡುವಾಗ ಕಾಲ ನೋಡಿಕೊಂಡು ಹೇಳಿದ್ರಾ? ಒಟ್ಟಾರೆ ಜನರಿಂದ ಇನ್ನಷ್ಟು ರಾಜಕೀಯವನ್ನು ತಿರಸ್ಕಾರಗೊಳ್ಳುವಷ್ಟು ನಾವೇ ತೆಗೆದುಕೊಂಡು ಹೋಗುತ್ತಿದ್ದೇವೆ. ಕೊಡಗಿನಲ್ಲಿ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದಾಗ ಸಂಕಟ ಆಗಿತ್ತು. ಆದ್ರೆ ಅದನ್ನು ಅವರ ಹಿಂಬಾಲಕರು ಸಮರ್ಥನೆ ಮಾಡಿಕೊಂಡರು. ಈ ರೀತಿಯ ಹಗುರವಾದ ಹಾಗೂ ತಿರಸ್ಕಾರಕ್ಕೆ ಯೋಗ್ಯವಾದ ಮಾತುಗಳು ಹೆಚ್ಚೆಚ್ಚು ಮಾಡುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.
ರೇವಣ್ಣ ಹೇಳಿದ್ದೇನು?:
ನನ್ನ ಅಧಿಕಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಕಾಂಗ್ರೆಸ್‍ನವರು ಬಹಿರಂಗವಾಗಿ ಹೇಳಲಿ. ನಾನು ಇಂತಹ ವಿಷಯದ ಬಗ್ಗೆ ಹೆದರುವುದಿಲ್ಲ. ಈ ಪುಟಗೋಸಿ ಮಂತ್ರಿ ಸ್ಥಾನ ಯಾರಿಗೆ ಬೇಕು ಎಂದು ರೇವಣ್ಣ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಹೇಳಿಕೆ ನೀಡಿದ್ದರು. ರೇವಣ್ಣ ಅವರ ಈ ಹೇಳಿಕೆ ಇದೀಗ ತೀವ್ರ ಚರ್ಚೆಯಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv