ರಾಯಚೂರು: ಕರ್ನಾಟಕಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಏನು ಮಾಡಿ ಹೋಗಿದ್ದಾರೆ? ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಬಿಜೆಪಿ (BJP) ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಯಚೂರು (Raichuru) ಜಿಲ್ಲೆಯಲ್ಲಿ ಇಂದಿನಿಂದ ಪಂಚರತ್ನ ಯಾತ್ರೆ (Pancharatna Yatra) ಆರಂಭವಾಗಿದ್ದು, ಲಿಂಗಸುಗೂರಿನ ಮುದಗಲ್‌ನಲ್ಲಿ ಮಾತನಾಡಿದ ಹೆಚ್‌ಡಿಕೆ, ರಾಜ್ಯದಲ್ಲಿ ಮೋದಿ ಸರಣಿ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ಎಲ್ಲಾ ಪಕ್ಷಗಳು ತಮ್ಮ ಸಂಖ್ಯೆ ಏರಿಕೆ ಮಾಡಿಕೊಳ್ಳಲು ಹೋರಾಟ ಮಾಡುತ್ತಿವೆ. ಮಂಡ್ಯದಲ್ಲಿ ಜೆಡಿಎಸ್ (JDS) ಭದ್ರಕೋಟೆ ಈ ಸಲ ಮುಗಿಸಬೇಕು ಅಂತಾ ಹೊರಟಿದ್ದಾರೆ. ಅದು ಮುಗಿಸಲು ಅವರ ಕೈಯಲ್ಲಿ ಇದೀಯಾ? ಜನರ ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಡೊಳ್ಳಿನ ಬೃಹತ್ ಹಾರದಿಂದ ಹೆಚ್‌ಡಿಕೆಗೆ ಅದ್ದೂರಿ ಸನ್ಮಾನ
Advertisement
Advertisement
ಮೋದಿ ಅವರು ಯಾದಗಿರಿ ಮತ್ತು ಕಲಬುರಗಿಗೆ ಬಂದು ಹೋದರು. ಈ ಜಿಲ್ಲೆಗಳಿಗೆ ಮೋದಿ ಏನು ಮಾಡಿದ್ದಾರೆ? ತೊಗರಿ ಬೆಳೆದ 25 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಮೋದಿ ಚಕಾರ ಎತ್ತಲಿಲ್ಲ. ಇವರು ಏನು ಮಾಡಿದ್ದಾರೆ ಅಂತಾ ನರೇಂದ್ರ ಮೋದಿ ನೋಡಿ ವೋಟು ಹಾಕುತ್ತಾರೆ. ಕೈಗಾರಿಕೆಗಳನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಭಾಗದ ಯುವಕರನ್ನು ಬೀದಿಪಾಲು ಮಾಡಿದ್ದಾರೆ. ಯಾವ ಮುಖ ಇಟ್ಕೊಂಡು ವೋಟು ಕೇಳುತ್ತಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಕಲ್ಯಾಣ ಕರ್ನಾಟಕದ ಕೆಲ ಹಳ್ಳಿಗಳು ಇನ್ನೂ ಶಿಲಾಯುಗದಲ್ಲಿ ಇದ್ದಂತೆ ಇವೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಬಡವರು ಬಡವರಾಗೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲು ಮಾಡಿದ್ದಾರೆ. ಆದ್ರೆ ಅಭಿವೃದ್ಧಿಗಾಗಿ ಬಂದ ಹಣ ಖರ್ಚು ಮಾಡುತ್ತಿಲ್ಲ. ಈಗಿನ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ ಜಾರಿ?
Advertisement
ಕಲ್ಯಾಣ ಕರ್ನಾಟಕದ ಹಳ್ಳಿಯಲ್ಲಿ ಇವತ್ತಿಗೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಸರ್ಕಾರ ಬಂದ ಮೇಲೆ ಶೇ.20, 30ರಷ್ಟು ಕೆಲಸವೇ ಆಗಿಲ್ಲ. ಕೊಟ್ಟ ಅನುದಾನ ಬೇರೆ ಕಡೆ ಡೈವರ್ಟ್ ಮಾಡುತ್ತಿದ್ದಾರೆ. ಪಂಚರತ್ನ ಯಾತ್ರೆ ಪ್ರತಿಯೊಂದು ಕುಟುಂಬಕ್ಕೂ ಅನುಕೂಲವಾಗುವ ಕಾರ್ಯಕ್ರಮ. ಇದನ್ನು ಜನರಿಗೆ ತಿಳಿಸಲು ಪಂಚರತ್ನ ಯಾತ್ರೆ ಶುರು ಮಾಡಿದ್ದೇವೆ ಎಂದರು.
ಗಾಣಗಾಪೂರ ಕ್ಷೇತ್ರ ಕಾಶಿ ಮಾದರಿ ಅಭಿವೃದ್ಧಿ ಮಾಡುವ ವಿಚಾರವಾಗಿ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೂರು ತಿಂಗಳಲ್ಲಿ ಈ ಸರ್ಕಾರ ಹೋದ್ರೆ ಸಿಎಂ ಮಾತು ಯಾವನು ಕೇಳ್ತಾನೆ. ಮೂರು ವರ್ಷ ಮಾಡದೇ ಇರುವವರು ಈಗ ಮಾಡುತ್ತಾರಾ? ಜನರ ಮತ ಪಡೆಯಲು ದಾರಿ ತಪ್ಪಿಸುವ ಘೋಷಣೆ ಮಾಡುತ್ತಾರೆಯೇ ವಿನಃ ಇವರಿಂದ ಯಾವ ಕೆಲಸವೂ ಆಗಲ್ಲ ಎಂದು ಲೇವಡಿ ಮಾಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k