ನಮ್ಮ ದೇಶ ಥರ್ಡ್ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ: ಕುಮಾರಸ್ವಾಮಿ

Public TV
2 Min Read
H D Kumaraswamy

– ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶ

ಬೆಂಗಳೂರು: ನಮ್ಮ ದೇಶ ಮೂರನೇ ಪಾರ್ಟಿಯ ಮಧ್ಯಸ್ಥಿಕೆ ಇಟ್ಟುಕೊಂಡಿಲ್ಲ. ಪಾಕ್ ಹಾಗೂ ನಮ್ಮ ನಡುವಿನ ಎಲ್ಲಾ ವಿಚಾರವನ್ನು ನಿಭಾಯಿಸುವ ಶಕ್ತಿಯಿದೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಹೇಳಿದರು.

ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರು(Pakistan) ಏನೇ ಉಪಟಳ ಮಾಡಿದ್ರೂ ಅವರಿಗೆ ಅಂತಿಮವಾಗಿ ದೊಡ್ಡಮಟ್ಟದ ಹೊಡೆತ ಬೀಳಲಿದೆ. ರಷ್ಯಾ ಮತ್ತು ಉಕ್ರೇನ್ ಇವತ್ತು ಯಾವ ಸ್ಥಿತಿ ಅನುಭವಿಸ್ತಾ ಇವೆ ಎಂದು ಎಲ್ಲರಿಗೂ ತಿಳಿದಿದೆ. ಆ ದೃಷ್ಟಿಯಿಂದ ಕೆಲವು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದರು. ಇನ್ನೂ ಪಾಕ್ ಬುದ್ಧಿ ಕಲಿಯದೇ ಇದ್ರೇ ಸರ್ವನಾಶವಾಗಲಿದೆ ಎಂದರು. ಇದನ್ನೂ ಓದಿ: ದೇಶದ ಸೈನಿಕರ ರಕ್ಷಣೆಗಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜೆ

ಕಳೆದ ಒಂದು ವಾರದಿಂದ ಪಹಲ್ಗಾಮ್‌ನಲ್ಲಿ(Pahalgam) ನಡೆದ ಉಗ್ರರ ಕೃತ್ಯ ದೇಶಾದ್ಯಂತ ಚರ್ಚೆಯಾಯ್ತು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi), ರಕ್ಷಣಾ ಸಚಿವರು ಹಲವು ಸಭೆಗಳನ್ನು ಮಾಡಿ ಉಗ್ರ ಚಟುವಟಿಕೆ ಅಂತಿಮ ಇತೀಶ್ರೀ ಹಾಡಬೇಕು ಎಂದು ಹೆಜ್ಜೆಯಿಟ್ಟರು. ನಮ್ಮ ದೇಶದ ಗೌರವ ಹಾಳಾಗಬಾರದೆಂದು ಪ್ರಧಾನಿಯವರು ಹಾಗೂ ಅಧಿಕಾರಿಗಳು ಕದನವಿರಾಮದ(Ceasefire) ನಿರ್ಧಾರ ತೆಗೆದುಕೊಂಡರು ಹೇಳಿದರು. ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

ಭಾರತೀಯ ಸೇನೆಯು ಕೇವಲ ಪಾಕ್‌ನ ಉಗ್ರ ನೆಲಗಳ ಮೇಲೆ ಮಾತ್ರ ದಾಳಿ ಮಾಡಿದೆ. ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಪಾಕ್ ಶರಣಾಗತಿಯಾಯ್ತು. ನನ್ನ ವೈಯಕ್ತಿಕ ಅಭಿಪ್ರಾಯವೇನೆಂದರೆ, ನಮ್ಮ ದಾಳಿಯಿಂದ ಪಾಕ್‌ಗೆ ಮುಖಭಂಗವಾಗಿದೆ. ಭಾರತ ಸೈನಿಕರ ದಾಳಿಯು ಪಾಕ್‌ಗೆ ನಡುಕ ಉಂಟುಮಾಡಿದೆ ಎಂದು ನುಡಿದರು.

ಪಿಒಕೆ ವಿಷಯದಲ್ಲಿ ನಮ್ಮ ಪ್ರಶ್ನೆ ಏನೆಂದರೆ ನಾವು ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದಕ್ಕಿಂತ ಪಾಕಿಸ್ಥಾನಕ್ಕೆ ಆದ ಮುಖಭಂಗ ಮತ್ತು ನಮ್ಮ ಸೈನಿಕರ ಮೇಲುಗೈ ಗಮನಿಸಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಾವು ಇಲ್ಲಿಯವರೆಗೆ ಯಾವುದೇ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟಿಲ್ಲ. ಇದನ್ನೂ ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಡಿಜಿಎಂಒಗಳ ಸಭೆಯನ್ನು ಕರೆದಿದ್ದರು. ಆದರೆ ಈ ಸಭೆ ಸಂಜೆಗೆ ಮುಂದೂಡಿಕೆಯಾಗಿದೆ ಎಂದರು. ಇದನ್ನೂ ಓದಿ: ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ

ಯುದ್ಧದ ಬಗ್ಗೆ ಜನರಲ್ಲಿ ಎರಡು ತರಹದ ಭಾವನೆಗಳಿವೆ. ಯುದ್ಧವಾಗಬೇಕು ಅನ್ನೋದು ಒಂದು ವರ್ಗದ ಭಾವನೆಯಾದರೆ, ಮತ್ತೊಂದೆಡೆ ನಮಗೆ ಆಗುವ ಪ್ರಾಣಿಹಾನಿಯಾಗುತ್ತದೆ. ನಮಗೆ ಶಕ್ತಿಯಿದೆ ಅಂತಾ ಇನ್ನೊಂದು ದೇಶದ ಮೇಲೆ ಗದಾಪ್ರಹಾರ ಮಾಡಿದ್ರೇ, ಇವತ್ತು ಉಕ್ರೇನ್, ರಷ್ಯಾದವರು ಒಂದು ವರ್ಷದಿಂದ ಯುದ್ಧ ಮಾಡಿ ಏನು ಸಾಧನೆ ಮಾಡ್ತಾ ಇದ್ದಾರೆ ಎಂಬುದು ಕೆಲವರ ಭಾವನೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬ್ಲಾಕ್‌ ಸೀರೆಯಲ್ಲಿ ಕಲರ್‌ಫುಲ್‌ ಆಗಿ ಮಿಂಚಿದ ನಭಾ!

ಕಾಶ್ಮೀರದಲ್ಲಿ(Kashmir) ಸಿಲುಕಿದಕೊಂಡ ಕರ್ನಾಟಕದ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು, ಈ ವಿಷಯ ತಿಳಿಯುತ್ತಿದ್ದಂತೆ ನಮ್ಮ ಇಲಾಖೆಯ ಗಮನಕ್ಕೆ ತಂದು ಅವರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ದೆಹಲಿಗೆ ಅವರು ತಲುಪಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು.

Share This Article