Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆಡಿಎಸ್‌ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್‌ಡಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಜೆಡಿಎಸ್‌ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್‌ಡಿಕೆ

Karnataka

ಜೆಡಿಎಸ್‌ ಬಗ್ಗೆ ಕಾಂಗ್ರೆಸ್ ನಡೆಸಿದ ಅಪಪ್ರಚಾರಕ್ಕೆ ಫಲಿತಾಂಶವೇ ಉತ್ತರ ನೀಡಿದೆ: ಹೆಚ್‌ಡಿಕೆ

Public TV
Last updated: November 2, 2021 5:28 pm
Public TV
Share
3 Min Read
h.d.kumaraswamy
SHARE

ಬೆಂಗಳೂರು: ಜೆಡಿಎಸ್‌ ಪಕ್ಷವು ಬಿಜೆಪಿ ಬಿ ಟೀಮ್‌ ಎಂದು ಕಾಂಗ್ರೆಸ್‌ ಪಕ್ಷದ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಹೇಳಿದರು.

sindagi 2

ಉಪ ಚುನಾವಣೆ ಫಲಿತಾಂಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸ್ಪರ್ಧೆ ಮಾಡಿತ್ತು ಎಂದು ಹೇಳಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ಸಿಕ್ಕಿರುವ ಮತಗಳೇ ಉತ್ತರ ನೀಡಿವೆ ಎಂದು ಕುಟುಕಿದರು. ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ; ಜಯದ ನಗೆ ಬೀರಿದ ಬಿಜೆಪಿ

ಸ್ಥಳೀಯ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ನಿಲ್ಲಿಸಲಾಯಿತು. ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹೇಳಿರುವಂತೆ ನಾನು ಉಪ ಚುನಾವಣೆ ಫಲಿತಾಂಶಕ್ಕೆ ಮಹತ್ವ ನೀಡುವುದಿಲ್ಲ. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೆಚ್‌ಡಿಕೆ ತಿಳಿಸಿದರು.

hanagal bypoll 2

ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ನಮ್ಮ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಪ್ರಚಾರದ ವೇಳೆ ನಾನು ಐವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಜನರ ಸ್ಪಂದನೆ ಉತ್ತಮವಾಗಿತ್ತು. ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನೀಡಿದ್ದ ನೀರಾವರಿ ಯೋಜನೆಗಳ ಬಗ್ಗೆ, ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಕಾರ್ಯಕ್ರಮಗಳು ಹಾಗೂ ಸಾಲ ಮನ್ನಾ ಬಗ್ಗೆ ಪ್ರತಿ ಹಳ್ಳಿಯಲ್ಲೂ ಜನ ಮಾತನಾಡಿದ್ದರು. ಸ್ವತಃ ಜನರೇ ನನ್ನ ಬಳಿಗೆ ಬಂದು ಈ ಬಗ್ಗೆ ಮಾತನಾಡುತ್ತಿದ್ದರು. ಆದರೂ ಈ ರೀತಿಯ ಫಲಿತಾಂಶ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

ಮನಗೂಳಿ ಮಗನ ಹೈಜಾಕ್
ಮಾಜಿ ಸಚಿವ ಎಂ.ಸಿ.ಮನಗೂಳಿ ಮರಣದ ನಂತರ ಅವರ ಪುತ್ರ ಅಶೋಕ್‌ ಮನಗೂಳಿ ಅವರನ್ನು ಕಾಂಗ್ರೆಸ್‌ ಹೈಜಾಕ್‌ ಮಾಡಿತು. ಜತೆಗೆ, ನಮ್ಮ ಸಂಘಟನೆಯನ್ನೂ ದುರ್ಬಲ ಮಾಡಲಾಗಿತ್ತು. ಇದು ನನ್ನ ಗಮನದಲ್ಲಿತ್ತು. ಮತಗಟ್ಟೆಗಳಲ್ಲಿ ಕಾರ್ಯಕರ್ತರನ್ನು ಗುರುತಿಸುವುದೇ ದೊಡ್ಡ ಸವಾಲಾಗಿತ್ತು. ಈ ಕಾರಣಕ್ಕೆ ನಮಗೆ ಹಿನ್ನಡೆ ಉಂಟಾಯಿತು. ಆದರೂ ಈ ಫಲಿತಾಂಶದಿಂದ ನಾನು ಅಧೀರನೂ ಆಗಿಲ್ಲ, ನನಗೆ ಆತಂಕವೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

sindagi 3

ಹಾನಗಲ್‌ನಲ್ಲಿ ನಮಗೆ ನೆಲೆ ಇರಲಿಲ್ಲ. ಆದರೆ, ಸಿಂದಗಿಯಲ್ಲಿ ನಮ್ಮವರೇ ಶಾಸಕರಿದ್ದರು. ಯಾವ ಚುನಾವಣೆಯಲ್ಲೂ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಬಂದಿರಲಿಲ್ಲ. ಯಾವಾಗಲೂ ಇಲ್ಲಿ ಜೆಡಿಎಸ್-ಬಿಜೆಪಿ ನಡುವೆ ಸ್ಪರ್ಧೆ ಇರುತ್ತಿತ್ತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ: ಡಿಕೆ ಶಿವಕುಮಾರ್

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತೆ ಉಪ ಚುನಾವಣೆಗಳು ನಡೆಯುವ ಬಗೆಯೇ ಬೇರೆ, ಸಾರ್ವತ್ರಿಕ ಚುನಾವಣೆಗಳು ನಡೆಯುವ ರೀತಿಯೇ ಬೇರೆ ಎಂದ ಅವರು, ನಮ್ಮ ಪಕ್ಷ 2023ನೇ ವಿಧಾನಸಭೆ ಚುನಾವಣೆ ಮೇಲೆ ಪೂರ್ಣ ಗಮನ ಕೇಂದ್ರೀಕರಿಸಿದೆ. ಅದಕ್ಕೆ ಬಿಡದಿಯಲ್ಲಿ ಸಂಘಟನಾ ಕಾರ್ಯಗಾರವನ್ನೂ ನಡೆಸಲಾಯಿತು. ಈಗ ಪಕ್ಷದ ಸಂಘಟನೆಯತ್ತಲೇ ನಾವು ಗಮನ ಇರಿಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

bommai 3

ಹಣದಿಂದಲೇ ಚುನಾವಣೆ ನಡೆದಿದೆ
ಉಪ ಚುನಾವಣೆಗಳು ನಡೆಯುವುದು ಹಣಬಲದಿಂದಲೇ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಸಿಂದಗಿಯಲ್ಲಿ ಕೊನೆ ಆಟ ಎಂದಿದ್ದ ಸಚಿವರೊಬ್ಬರ ಹೇಳಿಕೆಯನ್ನು ಮಾಧ್ಯಮಗಳೇ ವರದಿ ಮಾಡಿವೆ. ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ ಎನ್ನುವುದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿವೆ. ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಇದೇ ಆಗಿದೆ. ಸಿದ್ದರಾಮಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳ ಕಥೆ ಏನೂ ಎನ್ನುವುದು ತಿಳಿದ ವಿಷಯವೇ ಎಂದು ಮಾರ್ಮಿಕವಾಗಿ ನುಡಿದರು.‌

ಉಪ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಾರೆ ಎಂದು ಒತ್ತಿ ಹೇಳಿದರು.

HD Kumaraswamy at Bidadi 1

8ರಿಂದ ಜಿಲ್ಲಾವಾರು ಸಭೆ
ಇದೇ ನವೆಂಬರ್‌ 8ರಿಂದ 16ರವರೆಗೆ ಪಕ್ಷದ ಕಚೇರಿಯಲ್ಲಿ ಪ್ರತಿ ಜಿಲ್ಲಾವಾರು ಸಭೆಗಳನ್ನು ಕರೆಯಲಾಗಿದೆ. ಪ್ರತಿದಿನ ನಾಲ್ಕು ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ನಡೆಸಲಿದ್ದೇನೆ. ಪದಾಧಿಕಾರಿಗಳು ಹಾಗೂ ಸಂಭವನೀಯ ಅಭ್ಯರ್ಥಿಗಳು ಈ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟುವುದು ಹಾಗೂ ವಿಷಯಾಧಾರಿತವಾಗಿ ಹೋರಾಟ ನಡೆಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ೨೦೨೩ಕ್ಕೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

TAGGED:Bypollh d kumaraswamyPublic TVಉಪ ಚುನಾವಣೆಪಬ್ಲಿಕ್ ಟಿವಿಫಲಿತಾಂಶಹೆಚ್‌.ಡಿ.ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Actor Shivamanju
ನಿರ್ದೇಶಕನಾದ ಹಾಸ್ಯ ನಟ ಶಿವಮಂಜು
Cinema Latest Sandalwood Top Stories
Brahmagantu Geetha Bharathi Bhat Marriage
ಸದ್ದಿಲ್ಲದೆ ವಿವಾಹವಾದ ಬ್ರಹ್ಮಗಂಟು ನಟಿ
Cinema Latest Sandalwood Top Stories
Dhanya Ramkumar Pruthvi Ambaar Chowkidar
ಇಷ್ಟ ಆದೆ ನೀನು ಅಂತಿದ್ದಾರೆ ಪೃಥ್ವಿ ಅಂಬಾರ್ – ಧನ್ಯ
Cinema Latest Sandalwood
bigg boss season 12 kannada Rakshita Dhruvanth is in the secret room
ಅಯ್ಯೋ ದೇವರೇ ಒಂದೇ ರೂಮಿನಲ್ಲಿ ನಿಮ್ಮ ಜೊತೆ ಹೇಗೆ ಇರೋದು?- ಸೀಕ್ರೆಟ್‌ ರೂಮಿನಲ್ಲಿ ರಕ್ಷಿತಾ ಕಣ್ಣೀರು
Cinema Latest Top Stories TV Shows

You Might Also Like

Delhi Fog Flight Cancel
Latest

ದೆಹಲಿಯಲ್ಲಿ ದಟ್ಟ ಹೊಗೆ, ಮಂಜು – 100 ವಿಮಾನಗಳು ಕ್ಯಾನ್ಸಲ್, 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬ

Public TV
By Public TV
6 minutes ago
Pahalgam Terror Attack 2 1
Latest

Pahalgam Terror Attack | ಚಾರ್ಜ್‌ಶೀಟ್‌ ಸಲ್ಲಿಕೆ – ಆಪರೇಷನ್‌ ಮಹಾದೇವ್‌ನಲ್ಲಿ ಹತ್ಯೆಯಾದ ಉಗ್ರರ ಹೆಸರು ಉಲ್ಲೇಖ

Public TV
By Public TV
56 minutes ago
KSRTC
Bengaluru City

ಅಪಘಾತ ರಹಿತ ಸೇವೆ ಸಲ್ಲಿಸೋ KSRTC ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಳ

Public TV
By Public TV
1 hour ago
Reliance Jio
Latest

ಹೊಸ ವರ್ಷದ ಧಮಾಕಾ: ಜಿಯೋ ಹ್ಯಾಪಿ ನ್ಯೂ ಇಯರ್ 2026 ಪ್ಲಾನ್ ಔಟ್‌

Public TV
By Public TV
1 hour ago
Sonia Gandhi Kiren Rijiju
Latest

ಕಾಂಗ್ರೆಸ್ ರ‍್ಯಾಲಿಯಲ್ಲಿ ‘ಮೋದಿ ಸಮಾಧಿ’ ಘೋಷಣೆ – ಸದನದಲ್ಲಿ ಸೋನಿಯಾ ಗಾಂಧಿ ಕ್ಷಮೆಗೆ ಆಗ್ರಹಿಸಿದ ಬಿಜೆಪಿ

Public TV
By Public TV
1 hour ago
Prashanth Kishore Priyanak Gandhi
Latest

3 ವರ್ಷದ ಬಳಿಕ ಪ್ರಿಯಾಂಕಾ, ಪ್ರಶಾಂತ್‌ ಕಿಶೋರ್‌ ಮಾತುಕತೆ – ಮತ್ತೆ ಕಾಂಗ್ರೆಸ್‌ ಪರ ರಣತಂತ್ರ?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?