ಬಾಗಲಕೋಟೆ: ಜೆಡಿಎಸ್ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೇ ಬೇಡವೆಂದು ಮಾಧ್ಯಮಗಳಿಗೆ ಕೈ ಮುಗಿದ ಎಚ್ ಡಿಕೆ, ಎಲೆಕ್ಟ್ರಾನಿಕ್ ಮೀಡಿಯಾಗಳು ನಮ್ಮ ಪಕ್ಷದ ವರದಿ ಬಿತ್ತರಿಸುತ್ತಿಲ್ಲ. ಜನಗಳಿಗೆ ಒಳ್ಳೆಯ ಸಂದೇಶ ಕೋಡೋ ಸುದ್ದಿಗಳನ್ನು ಬಿತ್ತರಿಸುತ್ತಿಲ್ಲ. ನಾನೇನು ಮಾತಾಡ್ತೀನಿ ಅನ್ನೋದನ್ನು ಯಾವ ಚಾನೆಲ್ ಪ್ರಸಾರ ಮಾಡಲ್ಲ. ಒಟ್ಟಿನಲ್ಲಿ ನಮ್ಮ ವರದಿಯನ್ನು ಪ್ರಸಾರ ಮಾಡದೇ ಇರೋದಕ್ಕೆ ತೀವ್ರ ಬೇಸರವಾಗಿದೆ ಅಂತ ಹೇಳಿದ್ದಾರೆ.
ನನ್ನ ಸುದ್ದಿಗಳನ್ನ ಡಸ್ಟ್ ಬಿನ್‍ಗೆ ಹಾಕಿ ಬಿಸಾಕಲಾಗುತ್ತಿದೆ. ಬಿಜೆಪಿ ಕಾಂಗ್ರೆಸ್ ಬಗ್ಗೆ ಮಾತ್ರ ಸುದ್ದಿ ಪ್ರಸಾರ ಮಾಡಲಾಗ್ತಿದೆ. ಆದ್ರೆ ಜೆಡಿಎಸ್ ಬಗ್ಗೆ ಸುದ್ದಿ ಪ್ರಸಾರ ಮಾಡೋದಿಲ್ಲ. ಹೀಗಾಗಿ ನಾನೇಕೆ ನನ್ನ ಟೈಮ್ ವೇಸ್ಟ್ ಮಾಡಿಕೊಳ್ಳಲಿ. ಜನರ ಹತ್ತಿರ ಹೋಗ್ತೀನಿ, ಜನ ತೀರ್ಮಾನ ಮಾಡಲಿ. ಈ ಮಧ್ಯೆ ನಾವು ರಿಯಾಕ್ಷನ್ ನೀಡೋದೆ ತಪ್ಪು ಎನಿಸಿದೆ. ಹೀಗಾಗಿ ದಯಮಾಡಿ ನನ್ನ ಬಲವಂತ ಮಾಡಬೇಡಿ ಅಂತ ಮಾಧ್ಯಮಗಳ ಎದುರು ಕೈ ಮುಗಿದು ಮನವಿ ಮಾಡಿಕೊಂಡ್ರು.
ನಾನು ಈಗಾಗಲೇ ಮಾಜಿ ಮುಖ್ಯಮಂತ್ರಿ ಆಗಿ ಹೋಗಿದ್ದೇನೆ. ಈಗ ಎಲ್ಲ ಸುದ್ದಿ ವಾಹಿನಿಗಳು ಈ ರೀತಿ ಮಾಡುತ್ತಿವೆ. ನನಗೆ ತೀವ್ರ ನೋವು ತರಿಸಿದೆ ಎಂದು ತನ್ನ ಮನದಾಳದ ನೋವನ್ನು ಹೇಳಿಕೊಂಡರು.