ಕೋಲಾರ: ಕೋಲಾರ (Kolara) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ವಿಚಾರದ ನಂತರ ಇದೀಗ ಜೆಡಿಎಸ್ (JDS) ವಲಯದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಸ್ಪರ್ಧೆಯ ಕೂಗು ಕೇಳಿ ಬಂದಿದೆ.
Advertisement
ಸಿದ್ದು ಟ್ರಂಪ್ ಕಾರ್ಡ್ ಬಳಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣೆಗೆ ಸಿದ್ದವಾಗುತ್ತಿದ್ರೆ, ಜೆಡಿಎಸ್ ಕುಮಾರಸ್ವಾಮಿ ಹೆಸರನ್ನು ಹೇಳುವ ಮೂಲಕ ಜಿಲ್ಲೆಯಲ್ಲಿ ಮಾಜಿ ಸಿಎಂಗಳ ಅಖಾಡಕ್ಕೆ ವೇದಿಕೆ ಸಜ್ಜಾಗುತ್ತಿದೆ ಅನ್ನೋ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಳಪತಿಗಳು ಈ ಕುರಿತು ಹೊಸ ಆಲೋಚನೆ ಹಾಗೂ ಸಿದ್ದುಗೆ, ಕುಮಾರಸ್ವಾಮಿ ಹೆಸರನ್ನು ತೇಲಿ ಬಿಟ್ಟು ಕೋಲಾರ ಅಖಾಡವನ್ನು ಮತ್ತಷ್ಟು ರಂಗೇರುವಂತೆ ಮಾಡುತ್ತಿದ್ದಾರೆ. ರಾಜ್ಯದ ಮೂಡಣ ಬಾಗಿಲು ಕೋಲಾರದ ಮುಳಬಾಗಲು ಕ್ಷೇತ್ರದಿಂದ ನವೆಂಬರ್ 1 ರಿಂದ ಜಿಲ್ಲೆಯಾದ್ಯಂತ ಪಂಚರತ್ನ ಯಾತ್ರೆ ಪ್ರಾರಂಭದ ಪೂರ್ವಭಾವಿಯಾಗಿ ಕೋಲಾರದಲ್ಲಿ ಜೆಡಿಎಸ್ ಮುಖಂಡರು ಇಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ – ಕಾಂಗ್ರೆಸ್‍ಗೆ ಬೊಮ್ಮಾಯಿ ಸವಾಲು
Advertisement
Advertisement
ಈ ವೇಳೆ ಕೋಲಾರ ಜಿಲ್ಲಾ ಜೆಡಿಎಸ್ ಅದ್ಯಕ್ಷ ವೆಂಕಟಶಿವಾರೆಡ್ಡಿ ಹಾಗೂ ಪರಿಷತ್ ಸದಸ್ಯ ಗೋವಿಂದರಾಜು ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಾಸ್ವಾಮಿ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ನಾವೆಲ್ಲಾ ಇಚ್ಚಿಸಿದ್ದೇವೆ. ಕುಮಾರಸ್ವಾಮಿ ಅವರಿಗೆ ಕೋಲಾರ ಜಿಲ್ಲೆಯೊಂದಿಗೆ ನಿರಂತರ ಸಂಪರ್ಕವಿದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿದೆ. ಕೋಲಾರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಜಿಲ್ಲೆ ಅಭಿವೃದ್ಧಿಗೆ ಸಹಕಾರಿಯಾಗುತ್ತೆ. ಹೀಗಾಗಿ ಈ ಕುರಿತು ಹೆಚ್‍ಡಿಕೆಗೆ ಮನವಿ ಮಾಡಿಕೊಳ್ಳುತ್ತೇವೆ. ಹೆಚ್‍ಡಿಕೆ ಈ ನಾಡಿಗೆ ಮುಖ್ಯಮಂತ್ರಿಗಳಾಗುವುದು ಖಚಿತವಾಗಿದ್ದು, ಮುಖ್ಯಮಂತ್ರಿಗಳ ಸ್ಥಾನ ಕೋಲಾರಕ್ಕೆ ಬರುತ್ತದೆ. ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ನಿಜವಾದ ಕಾಫಿಯಿದ್ದಂತೆ, ಬಿಜೆಪಿ ಕಾಫಿಯ ನೊರೆಯಷ್ಟೆ – ಪ್ರಶಾಂತ್ ಕಿಶೋರ್
Advertisement
ಕೋಲಾರಕ್ಕೆ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಕೊಡುಗೆ ಏನೂ ಇಲ್ಲ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಜಿಲ್ಲೆಯ ಸಮಸ್ಯೆಗಳನ್ನು ಅರಿತಿದ್ದು, ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒಮ್ಮತದಿಂದ ಒತ್ತಾಯಿಸಲಾಗುವುದು ಎಂದು ತಿಳಿಸಿದರು.