ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕುಟುಂಬದ ವೈಯಕ್ತಿಕ ಜಗಳ ಇದು. ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ನಿತ್ಯ ಟಾಕ್ ವಾರ್ ನಡೀತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಇದು ಇಬ್ಬರ ನಡುವೆ ವೈಯಕ್ತಿಕ ಟಾಕ್ ವಾರ್ ನಡೀತಿದೆ. ಜನ ಅಭಿವೃದ್ಧಿ ಕೇಳ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಇದೇ ನಡೀತಿರಲಿ ಅಂತಾ ಕಾಂಗ್ರೆಸ್ ಬಯಸುತ್ತಿದೆ. ಡಿಕೆಶಿ ಮತ್ತು ಹೆಚ್‌ಡಿಕೆ ನಡುವಿನ ಕುಟುಂಬದ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಇದರಲ್ಲಿ ಎರಡು ಮಾತಿಲ್ಲ. ಆದರೆ ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ ಮೇಲೆ ಪರಿಣಾಮ ಆಗಲ್ಲ. ಮೈತ್ರಿ ಮುಂದುವರೆದುಕೊಂಡು ಹೋಗ್ತಿದೆ. ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಯಾವ ರೀತಿ ಆಗಬೇಕು ಅಂತಾ ಚರ್ಚೆ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್!
ವೈಯಕ್ತಿಕ ಗಲಾಟೆ ಇದು. ಅವರಿಬ್ಬರ ಕುಟುಂಬದ ಗಲಾಟೆ. ಅವರ ವೈಯಕ್ತಿಕ ಗಲಾಟೆಯನ್ನು ರಾಜ್ಯದ ಜನರ ಗಲಾಟೆಯಾಗಿ ಮಾಡಲು ಹೊರಟಿದ್ದಾರೆ. ಇದು ರಾಜಕೀಯದಲ್ಲಿ ಒಳ್ಳೆಯದಲ್ಲ ಎಂದರು.
ಬಿಜೆಪಿ ಸೋಷಿಯಲ್ ಮೀಡಿಯಾ ಸಂಚಾಲಕ ಪ್ರಶಾಂತ್ ಮಾಕನೂರು ವಿಚಾರಣೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನವರು ಸಹ ಅನೇಕ ಟ್ವೀಟ್ ಮಾಡಿದ್ದಾರೆ. ಆಪಾದನೆಗಳನ್ನೂ ಮಾಡಿದ್ದಾರೆ. 40% ಆರೋಪ ನಮ್ಮ ಮೇಲೆ ಮಾಡಿದ್ರು, ದಾಖಲೆ ಕೊಡಲಿಲ್ಲ. ಕಾಂಗ್ರೆಸ್ ಅಂದ್ರೆ ಸುಳ್ಳು. ನಮ್ಮ ಸೋಷಿಯಲ್ ಮೀಡಿಯಾದ ಸಂಚಾಲಕನನ್ನ ವಿಚಾರಣೆಗೆ ನೋಟಿಸ್ ಕೊಟ್ಟು ಬಂಧಿಸಿದರು. ಇದು ತಪ್ಪು, ಹೀಗೆ ಮಾಡಬಾರದು ಕಾಂಗ್ರೆಸ್. ಕಾಂಗ್ರೆಸ್‌ನವರ ಸರ್ಕಾರ ಇದೆ ಅಂತಾ ದುರಹಂಕಾರ ಮೆರೆಯುತ್ತಿದ್ದಾರೆ. ಬಹಳ ದಿನ ಸರ್ಕಾರ ಉಳಿಯಲ್ಲ, ಅಂತಿಮ ದಿನ ಎಣಿಸ್ತಿದೆ ಕಾಂಗ್ರೆಸ್ ಸರ್ಕಾರ. ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರ ಕಿರುಕುಳ ಕೊಡ್ತಿದೆ. ಇದನ್ನು ಖಂಡಿಸ್ತೇನೆ, ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ನನ್ನ ಸಂಪರ್ಕಕ್ಕೆ ಬಂದಿಲ್ಲ: ನಿಖಿಲ್ ಕುಮಾರಸ್ವಾಮಿ
ಡೌಟೇ ಇಲ್ಲ ಈ ಸರ್ಕಾರ ಉಳಿಯಲ್ಲ. ಸರ್ಕಾರ ಉಳಿಯಲ್ಲ ಅಂತ ಕಾಂಗ್ರೆಸ್‌ನವರೇ ಹೇಳ್ತಿದ್ದಾರೆ. ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಆಗಿಲ್ಲ ಅಂತ ಬೇಜಾರಲ್ಲಿದ್ದಾರೆ. ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಇಲ್ಲ. ಬರದ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಬೀಳೋ ಹಂತಕ್ಕೆ ಬಂದಿದೆ, ಮುಂದೆ ಪಿಕ್ಚರ್ ಬಾಕಿ ಇದೆ. ಮಹಾರಾಷ್ಟ್ರದಲ್ಲಿ ಏನಾಗಿದೆ ಅಂತ ಎಲ್ಲರೂ ನೋಡಿದೀರ. ಬಹಳ ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಸಂಪರ್ಕದಲ್ಲಿ ಇಲ್ಲ ಅಂತಾ ಹೇಳಲ್ಲ. ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು ಪಾಪಿ ಸರ್ಕಾರ, ಅಭಿವೃದ್ಧಿ ಮಾಡದ ಸರ್ಕಾರ ಎಂದು ಕಿಡಿಕಾರಿದರು.