ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಘೋರ ಅವಮಾನವಾಗಿದೆ.
ವೈಕುಂಠ ಏಕಾದಶಿ ದಿನ ತಿಮ್ಮಪ್ಪನ ದರ್ಶನಕ್ಕೆ ತೆರಳಿದಾಗ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಅವರಿಗೆ ಟಿಟಿಡಿಯಿಂದ ಅವಮಾನವಾಗಿದೆ. ಪ್ರೊಟೋಕಾಲ್ ಪಾಲಿಸದೇ ಸಾಧಾರಣ ನೌಕರರಿಂದ ಆಹ್ವಾನಿಸಿ ಅವಮಾನ ಮಾಡಿದ್ದಾರೆ.
ಟಿಟಿಡಿ ಜೆಇಓ ಶ್ರೀನಿವಾಸರಾಜು ಹೆಚ್‍ಡಿಡಿ ಮತ್ತು ಎಚ್‍ಡಿಕೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಬಳಿ ಟಿಟಿಡಿ ಸಿಬ್ಬಂದಿ ಇಬ್ಬರನ್ನು ಬಿಟ್ಟು ಹೋಗಿದ್ದಾರೆ. ಯಾವ ದಾರಿಯಲ್ಲಿ ತೆರಳುವುದು ಎಂದು ಗೊತ್ತಾಗದೇ ಹೆಚ್‍ಡಿಡಿ ಮತ್ತು ಹೆಚ್‍ಡಿಕೆ 20 ನಿಮಿಷ ಪರದಾಡಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಎಲ್ಲಿದ್ದಾರೆ ಎಂದು ಗೊತ್ತಾಗದೇ ಭದ್ರತಾ ಸಿಬ್ಬಂದಿ ಕೂಡ ಆತಂಕಕ್ಕೆ ಒಳಾಗಿದ್ದರು. ಉದ್ಯಮಿಗಳನ್ನು ಮುಂದೆ ನಿಂತು ಆಹ್ವಾನಿಸುವುದಕ್ಕೆ ಆಗುತ್ತೆ. ಆದರೆ ಮಾಜಿ ಪ್ರಧಾನಿ, ಮುಖ್ಯಮಂತ್ರಿಯನ್ನು ಆಹ್ವಾನಿಸೋಕೆ ಆಗಲ್ವಾ..? ಎಂದು ಟಿಟಿಡಿ ಮಾಡಿದ ಅವಮಾನದ ಬಗ್ಗೆ ಮಾಜಿ ಸದಸ್ಯ ರಮಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv