ಬೆಂಗಳೂರು: ಲೋಕಸಭಾ ಅಧಿವೇಶನದಲ್ಲಿ ಸುದೀರ್ಘ ಭಾಷಣದ ಮೂಲಕ ಕಾಂಗ್ರೆಸ್ ಹಾಗೂ ಕರ್ನಾಟಕ ಸರ್ಕಾರ ವಿರುದ್ಧ ಗುಡಿಗಿದ್ದ ಪ್ರಧಾನಿ ನರೇಂದ್ರ ಅವರಿಗೆ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ನಾವು ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದು, ಸಾಲ ಮನ್ನಾ ಪ್ರಕ್ರಿಯೆ ‘ಚಾಲನೆ’ಯಲ್ಲಿದೆ. ಮೋದಿ ರಾಮಮಂದಿರ ನಿರ್ಮಾಣ, ನದಿ ಜೋಡಣೆ, ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಮೋದಿ ಹೇಳಿದ್ದು ಇದೂವರೆಗೆ ಯಾವುದೇ ‘ಚಾಲನೆ’ ಕಂಡಿಲ್ಲ. ‘ನಡೆಯದೇ’ ಇರುವುದಕ್ಕಿಂತ ‘ಚಾಲನೆ’ಯಲ್ಲಿದೆ ಎನ್ನುವ ಪ್ರಕ್ರಿಯೆ ದೊಡ್ಡದು. ಸದ್ಯಕ್ಕೆ ಬಿಜೆಪಿಯ ‘ಆಪರೇಷನ್ ಕಮಲ’ ಒಂದೇ ಕರ್ನಾಟಕದಲ್ಲಿ ‘ಚಾಲನೆ’ಯಲ್ಲಿದೆ ಎಂದು ದೇವೇಗೌಡ ಟ್ವೀಟ್ ಮಾಡಿ ಕುಟುಕಿದ್ದಾರೆ.
Advertisement
Our promise: FarmersLoanWaiver
-Status: Ongoing
Modi's promise: Ram Mandir,Clean Ganga,Interlinking of rivers,15Lakh into bank accounts
-Status: Never
'Ongoing' is a better status to be in than 'Never'.
The only 'Ongoing' status in BJP is 'Operation Lotus' attempt in Karnataka.
— H D Devegowda (@H_D_Devegowda) February 7, 2019
Advertisement
4 ಲಕ್ಷ ರೈತರಿಗೆ 1900 ಕೋಟಿ ರೂ. ಹಣವನ್ನು ಈಗಾಗಲೇ ನೀಡಲಾಗಿದೆ. ರೈತರ ಸಾಲಮನ್ನಾ ಮಾಡಲು ಕಮರ್ಷಿಯಲ್ ಬ್ಯಾಂಕ್ ಗಳಿಗೆ ಫೆ.1 ರಂದೇ ಮೊದಲ ಕಂತನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ clws.karnataka.gov.in ಭೇಟಿ ನೀಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವದ ದೇವಾಲಯದಿಂದ ದೇಶಕ್ಕೆ ನಿರಂತರವಾಗಿ ಸುಳ್ಳು ಹೇಳುತ್ತಿರುವುದು ದುರಾದೃಷ್ಟಕರ ಎಂದು ಬರೆದು ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
Advertisement
About Rs1900 crores already given to 4lakh farmers.All eligible commercial bank loanee farmers to get 1st installment in Feb itself.
Details@ https://t.co/K2DJo4P44F
It is unfortunate that PM @narendramodi continues to mislead the nation from the Temple of Democracy-theParliament pic.twitter.com/sGID7BHA1B
— CM of Karnataka (@CMofKarnataka) February 7, 2019
Advertisement
ಮೋದಿ ಹೇಳಿದ್ದು ಏನು?
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಸರ್ಕಾರಿ ದಾಖಲೆಗಳ ಪ್ರಕಾರ 43 ಲಕ್ಷ ಮಂದಿಗೆ ನರವಾಗಬೇಕಿತ್ತು. ಆದರೆ ಇಲ್ಲಿಯವರೆಗೆ ಕೇವಲ 60 ಸಾವಿರ ರೈತರ ಸಾಲ ಮನ್ನಾ ಮಾಡಲಾಗಿದೆ. ನಾನು ಸರ್ಕಾರಿ ದಾಖಲೆಯನ್ನು ಇಟ್ಟುಕೊಂಡು ಮಾತನಾಡುತ್ತೇನೆ. 10 ದಿನದಲ್ಲಿ ನಾವು ಸಾಲ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಹೇಳಿತ್ತು. ಆದರೆ ಈ ಆದೇಶ ಇನ್ನೂ ಕಾಗದ ಪತ್ರದ ಮೇಲಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv