DistrictsKarnatakaLatestLeading NewsMain PostRamanagara

ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

Advertisements

ರಾಮನಗರ: ಪಕ್ಷದ ಮುಖಂಡರ ಏಳಿಗೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ಅವರು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.

ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ಈಗಾಗಲೇ ಹಲವು ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ. ಪಕ್ಷದ ಮುಖಂಡರ ಏಳಿಗೆಯನ್ನು ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ. ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದರು. ಇವರ ರಾಜಕಾರಣ ನೋಡಿ ನನಗೆ ಬೇಸರವಾಗಿದೆ. ನನಗೆ ಕುಮಾರಸ್ವಾಮಿ ಬಗ್ಗೆ ಬೇಸರ ಇಲ್ಲ. ಅವರ ನಡವಳಿಕೆ ಬಗ್ಗೆ ಬೇಸರ. ಕುಮಾರಸ್ವಾಮಿ ಸರಿಯಾಗಿ ಈ ರಾಜ್ಯದಲ್ಲಿ ಇದ್ದಿದ್ದರೆ ಅವರಂತ ನಾಯಕರೇ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಅವರು ನಾಯಕತ್ವವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ರಾಮನಗರದಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ಹೆಚ್.ಸಿ.ಬಾಲಕೃಷ್ಣ ಅವರು ಮೊದಲು ತಮ್ಮ ನೆಲೆ ಬಗ್ಗೆ ಚಿಂತೆ ಮಾಡಲಿ. ಪಾಪ ಅವರಿಗೆ ನಮ್ಮ ಪಕ್ಷದ ಚಿಂತೆ ಯಾಕೆ ಈಗಾಗಲೇ ಜನ ತಿರಸ್ಕಾರ ಮಾಡಿದ್ದಾರೆ. ಜೆಡಿಎಸ್ ಮುಗಿಸುತ್ತೇವೆ ಎಂದು ಟೋಪಿ ಹಾಕಿ ಹೋಗಿದ್ದ ಅವರಿಗೆ ಜನರ ಕೊಟ್ಟಿರುವ ತೀರ್ಪನ್ನು ಅರಗಿಸಿಕೊಳ್ಳಲಿ. ಜೆಡಿಎಸ್ ಮುಳಗುತ್ತೋ, ಏಳತ್ತೋ ಜನ ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್

Leave a Reply

Your email address will not be published.

Back to top button