– ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ
ಬಿಡದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಆರೋಪಕ್ಕೆ ಮಾಗಡಿ ಹಾಲಿ ಜೆಡಿಎಸ್ ಶಾಸಕ ಎ.ಮಂಜು ತಿರುಗೇಟು ನೀಡಿದ್ದಾರೆ.
Advertisement
ಬಾಲಕೃಷ್ಣ ಅವರ ಆರೋಪಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜು ಅವರು, ನಾನು ಮಾತನಾಡಿದರೆ ಅವರ ಪೂರ್ವಜರಷ್ಟು ಮಾತನಾಡ್ತೇನೆ. ಇವರ ರೀತಿ ಹಲ್ಕಟ್ ರಾಜಕೀಯ ನಾನು ಮಾಡಲ್ಲ. 10 ಕೋಟಿ ಹಣ ಪಡೆದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಇವತ್ತು ನನ್ನ ಬಗ್ಗೆ ಇಲ್ಲಸಲ್ಲದನ್ನು ಮಾತನಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಕ್ಕಳಿಗೆ ಐಸ್ ಕ್ರೀಂ ನೀಡದ್ದಕ್ಕೆ ಅಂಗಡಿ ಮೇಲೆ ದಾಳಿ ಮಾಡಿದ ತಂದೆ
Advertisement
Advertisement
ಡಿ.ಕೆ.ಶಿವಕುಮಾರ್ ಅವರಿಗೆ, ಡಿ.ಕೆ.ಸುರೇಶ್ ಅವರಿಗೆ ನನ್ನಿಂದ ಸಹಾಯ ಆಗಿದೆ. ಆದರೆ ಅವರಿಂದ ನನಗೇನು ಸಹಾಯ ಆಗಿಲ್ಲ. ತೆಗೆದುಕೊಂಡಿದ್ದ ಹಣಕ್ಕೆ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಅವರು ನನ್ನ ಪರವಾಗಿ ಇದ್ದಿದ್ದನ್ನ ಸಾಬೀತು ಮಾಡಲಿ. ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇವರು ಕುಮಾರಸ್ವಾಮಿ ಅವರಿಗೆ ಚಾಕಲೇಟ್ ಕೊಟ್ಟು ಐಸ್‍ಕ್ರೀಂ ನೆಕ್ಕಿ ಹೋದರು. ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ. ಅದು ನನಗೆ ಗೊತ್ತಿದೆ. ಹಾಗಾಗಿ ನಾನು ಕುಮಾರಣ್ಣನ ಜೊತೆಗೆ ಇರುತ್ತೇನೆ ಎಂದರು.