ಲಕ್ನೋ: ಜ್ಞಾನವಾಪಿ (Gyanvapi) ಸಮೀಕ್ಷೆಯ ವರದಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂದು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಿದೆ.
ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿ (Avinash Mohanty) ಅವರ ರಕ್ತದೊತ್ತಡ ಹಠಾತ್ ಹೆಚ್ಚಳ ಮತ್ತು ಆರೋಗ್ಯ ಹದಗೆಟ್ಟಿದ್ದರಿಂದ ಡಿಸೆಂಬರ್ 11ರಂದು ವರದಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಕೋರ್ಟ್ ಒಂದಿ ವಾರದ ಸಮಯ ನೀಡಿತ್ತು. ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ಆದೇಶದ ಮೇರೆಗೆ ಎಎಸ್‍ಐ ಜ್ಞಾನವಾಪಿ ಮಸೀದಿಯಮ ಆವರಣದಲ್ಲಿ ಜುಲೈ 24ರಂದು ಸರ್ವೆ ಕಾರ್ಯ ಆರಂಭಿಸಲಾಗಿದ್ದು, ನವೆಂಬರ್ ನ.2ರಂದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು.
Advertisement
Advertisement
ಸರ್ವೆ ಬಳಿಕ ವರದಿಯನ್ನು ಸಿದ್ಧಪಡಿಸಲು 15 ದಿನಗಳ ಹೆಚ್ಚುವರಿ ನೀಡಲಾಗಿತ್ತು. ಬಳಿಕ ವಿವಿಧ ಹಂತದಲ್ಲಿ ನ್ಯಾಯಾಲಯವು ವರದಿ ಸಲ್ಲಿಸಲು ನಾಲ್ಕು ಬಾರಿ ಹೆಚ್ಚುವರಿ ಸಮಯವನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಎಎಸ್‍ಐ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರಾ ಅಥವಾ ಮತ್ತೊಮ್ಮೆ ಹೆಚ್ಚುವರಿ ಕಾಲಾವಕಾಶ ಕೋರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ
Advertisement
Advertisement