– ಮಠದ ಕೋಟಿ ಕೋಟಿ ಹಣ ದೋಚಿದ್ರಾ ಶಾಸಕ ಸೈಲ್?
ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್‌ಗೆ (Satish Sail) ಏಳು ವರ್ಷಗಳು ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಆದರೆ, ಶಾಸಕ ಸತೀಶ್ ಸೈಲ್ ಗೆ ಬಾಡದ ಗುರುಮಠದ ಶಾಪ, ಇಂದು ಅವರ ಈ ಸ್ಥಿತಿಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
ಹೌದು, ಕಾರವಾರದ ದತ್ತಪೀಠದ ಗುರುಮಠದ ಪದ್ಮನಾಭ ತೀರ್ಥ ಸ್ವಾಮೀಜಿಯವರ ಶಾಪ ಸೈಲ್‌ಗೆ ತಟ್ಟಿದೆ ಎಂಬ ಮಾತು ಸದ್ದು ಮಾಡುತ್ತಿದೆ. ಏನಿದು ಶಾಪ? ಸೈಲ್‌ಗೂ ಮಠಕ್ಕೂ ಇರುವ ಸಂಬಂಧ ಏನು? ಇದನ್ನೂ ಓದಿ: ನಾಳೆ ಒಳಗಡೆ ಬಾಕಿ ಹಣ ನೀಡಿ: ಸಕ್ಕರೆ ಕಾರ್ಖಾನೆಗಳಿಗೆ ಬಾಗಲಕೋಟೆ ರೈತರ ಗಡುವು
Advertisement
Advertisement
ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 44 ಕೋಟಿಗೂ ಅಧಿಕ ದಂಡ ವಿಧಿಸಿದೆ. ಬರೋಬ್ಬರಿ 14 ವರ್ಷಗಳ ಹಿಂದಿನ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ ಈಗ ಶಿಕ್ಷೆ ಆಗಿರುವುದಕ್ಕೆ ಆ ಗುರುಮಠದ ಶಾಪ ಕಾರಣ ಎಂದು ಕಾರವಾರದಲ್ಲಿ ಭಾರಿ ಚರ್ಚೆ ನಡೆದಿದೆ. 2013ರಲ್ಲಿ ಇದೆ ಪ್ರಕರಣದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿ ಬಂದಿದ್ದ ಶಾಸಕ ಸೈಲ್ ಎರಡನೇ ಬಾರಿ ಶಾಸಕನಾಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ, 2023ರ ಅಗಸ್ಟ್ 30ರಂದು ಕಾರವಾರ ನಗರದ ಬಾಡದಲ್ಲಿರುವ ಗುರುಮಠದ ಆಸ್ತಿಯನ್ನ ಕೊಳ್ಳೆ ಹೊಡೆಯಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ತಮ್ಮ ಆಪ್ತರೇ ಈ ಮಠದ ಆಡಳಿತ ನಡೆಸಬೇಕೆಂದು ದೊಡ್ಡ ಗಲಾಟೆ ಮಾಡಿದ್ದಲ್ಲದೆ, ಮಠಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಯನ್ನು ದೊಚ್ಚಿದ್ದಾರೆ. ಅಂದು ನಾನು ಅವರಿಗೆ ಮಠದ ವಿಷಯದಲ್ಲಿ ಹೋಗಬೇಡಿ ಎಂದರೂ ಬಿಡದೇ ಮಠವನ್ನು ಒಡೆದರು, ನಗ ನಾಣ್ಯ ಲೂಟಿ ಮಾಡಿಸಿದರು. ಈ ವಿಚಾರವಾಗಿ ನಾನು ಕೂಡ ಕೇಸ್ ದಾಖಲಿಸಿದ್ದು ಕೊರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಗುರುಮಠದ ಮಾಜಿ ಅಧ್ಯಕ್ಷ ಸಂತೋಷ್ ಗುರುಮಠ ಆರೋಪಿಸಿದ್ದಾರೆ.
Advertisement
19ನೇ ಶತಮಾನದಲ್ಲಿ ಮಹಾರಾಷ್ಟ್ರದಿಂದ ಬಂದು ಕಾರವಾರದಲ್ಲಿ ನೆಲೆಸಿದ್ದ ಪದ್ಮನಾಭ ತೀರ್ಥ ಗುರುಗಳು ಕಾರವಾರದ ನಗರದ ಹೃದಯ ಭಾಗದಲ್ಲಿ ವಿಶಾಲವಾದ ಸ್ಮಶಾನ ಭೂಮಿಯಲ್ಲಿ ಸುಂದರವಾದ ಮಠವನ್ನು ನಿರ್ಮಾಣ ಮಾಡಿದ್ದಾರೆ. ಬಂದ ಭಕ್ತರಿಗೆ ಸಂಕಷ್ಟ ನಿವಾರಣೆ ಮಾಡುತ್ತಾ ಅಪಾರ ಭಕ್ತರನ್ನು ಗಳಿಸಿದ್ದ ಅವರು, ಜೀವಂತವಾಗಿಯೇ ಸಮಾಧಿಯಾಗಿದ್ದರು. ಮಠಕ್ಕೆ ಉತ್ತರಾಧಿಕಾರಿ ಮಾಡದೇ ಭಕ್ತರಿಂದಲೇ ನಡೆದುಕೊಂಡು ಹೋಗುವಂತೆ ಸೂಚಿಸಿದ್ದರು. ಗುರುಮಠದ ದೈವ ಶಕ್ತಿಯಿಂದ ಭಕ್ತರು ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ, ಒಡವೆ ಹಾಗೂ ಕೆಲವರು ಹಣವನ್ನು ನೀಡಿದ್ದಾರೆ. ಸದ್ಯ ಕಾರವಾರದ ಶ್ರೀಮಂತ ಮಠಗಳಲ್ಲಿ ಒಂದಾದ ಈ ಗುರುಮಠದ ಮೇಲೆ ಕಣ್ಣು ಹಾಕಿದ್ದ ಸತೀಶ್ ಸೈಲ್ 2023ರ ಅಗಸ್ಟ್ 30ರಂದು ಭಾರಿ ಗಲಾಟೆ ಮಾಡಿ ಮಠವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಮಠದಲ್ಲಿರುವ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಂಡೂರು| ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಲು ರೆಡ್ಡಿ ಗೇಮ್!