ಗುರುಗ್ರಾಮ: ನಾಯಿ ಕಚ್ಚಿದ ಘಟನೆಗೆ ಸಂಬಂಧಿಸಿದಂತೆ ಸುರಕ್ಷತೆಯ ಲೋಪಕ್ಕೆ ಎಂದು ಗುರುಗ್ರಾಮ್ ಜಿಲ್ಲಾ ಗ್ರಾಹಕರ ವೇದಿಕೆಯು ಗೇಟೆಡ್ ಹೌಸಿಂಗ್ ಸೊಸೈಟಿಯ ನಿರ್ವಹಣೆ ಮತ್ತು ಅದರ ಭದ್ರತಾ ಏಜೆನ್ಸಿಯ ಮೇಲೆ ಸುಮಾರು 4 ಲಕ್ಷ ರೂ. ದಂಡವನ್ನು ವಿಧಿಸಿದೆ.
ಗುರುಗ್ರಾಮ ನಿವಾಸಿಯಾದ ಪಂಕಜ್ ಅಗರ್ವಾಲ್ ಅವರು ಕುಟುಂಬದೊಂದಿಗೆ ಅಪಾರ್ಟ್ಮೆಂಟ್‌ವೊಂದರ ಬಾಡಿಗೆಮನೆಯಲ್ಲಿ ವಾಸವಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಂಕಜ್ ಅಗರ್ವಾಲ್ ಅವರ ಮಗಳಿಗೆ ಅಪಾರ್ಟ್ಮೆಂಟ್‌ನಲ್ಲಿದ್ದ ನಾಯಿಯೊಂದು ಕಚ್ಚಿದೆ. ಈ ಹಿನ್ನೆಲೆ ಗೇಟೆಡ್ ಹೌಸಿಂಗ್ ಸೊಸೈಟಿಯ ನಿರ್ವಹಣೆ ಮತ್ತು ಅದರ ಭದ್ರತೆ ಸರಿಯಿಲ್ಲ ಎಂದು ಅವರು ಗ್ರಾಹಕರ ವೇದಿಕೆಗೆ ದೂರು ಕೊಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ವೇದಿಕೆ 4 ಲಕ್ಷ ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟವರ 9 ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
Advertisement
Advertisement
ದೂರಿನಲ್ಲಿ ಏನಿದೆ?
ಬಾಡಿಗೆ ಒಪ್ಪಂದದ ಪ್ರಕಾರ, ನಾನು ತಿಂಗಳಿಗೆ 3 ಲಕ್ಷ ರೂ. ಬಾಡಿಗೆ ಮತ್ತು 1 ಲಕ್ಷ ರೂ. ನಿರ್ವಹಣೆ ಶುಲ್ಕವನ್ನು ಪಾವತಿಸಿದ್ದೇನೆ. ಫೆಬ್ರವರಿ 2020ರಲ್ಲಿ ನನ್ನ ಮಗಳು ಶಿವಿ ತನ್ನ ಚಿಕ್ಕಪ್ಪನನ್ನು ಭೇಟಿಯಾಗಲು ನಮ್ಮ ಅಪಾರ್ಟ್ಮೆಂಟ್‌ನಲ್ಲಿಯೇ 22ನೇ ಮಹಡಿಗೆ ಲಿಫ್ಟ್‌ನಲ್ಲಿ ಹೋಗಿದ್ದಾಳೆ. 10ನೇ ಮಹಡಿಯಲ್ಲಿ ರಾಕೇಶ್ ಕಪೂರ್ ಅವರ ಕೆಲಸದವನು ನಾಯಿಯೊಂದಿಗೆ ಲಿಫ್ಟ್ ಒಳಗೆ ಬಂದಿದ್ದಾನೆ.
Advertisement
ಅದು ನನ್ನ ಮಗಳ ಮೇಲೆ ಹಾರಿ ಅವಳನ್ನು ಕಚ್ಚಿತು. ಇದರಿಂದ ಅವಳಿಗೆ ಆಘಾತವನ್ನುಂಟು ಮಾಡಿತು. ಕೆಲಸದವನು ನನ್ನ ಮಗಳನ್ನು ಅಲ್ಲಿಯೇ ಬಿಟ್ಟು ಸಾಕುಪ್ರಾಣಿಯೊಂದಿಗೆ ಹೊರಟು ಹೋಗಿದ್ದಾನೆ. ಅವಳು ಚಿಕ್ಕಪ್ಪನ ಫ್ಲಾಟ್‍ಗೆ ತಲುಪಿದ್ದು, ಮನೆಯವರೆಲ್ಲ ಸೇರಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಈ ಹಿನ್ನೆಲೆ ನನ್ನ ಮಗಳು ಎರಡು ವಾರಗಳ ಕಾಲ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರಿಂದ ಅವಳ ಜೀವನಕ್ಕೆ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಶೀಲ ಶಂಕಿಸಿ ತಲೆ ಹಿಡಿದು ನೆಲಕ್ಕೆ ಜಜ್ಜಿದ ಪತಿ – ಸ್ಥಳದಲ್ಲೇ ಪತ್ನಿ ಸಾವು
Advertisement
ಗ್ರಾಹಕರ ವೇದಿಕೆಯಲ್ಲಿ ನಡೆದ ವಿಚಾರಣೆಯ ವೇಳೆ, ಘಟನೆಯಲ್ಲಿ ಆರು ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣೆಯ ನಂತರ, ಸಂಜೀವ್ ಜಿಂದಾಲ್ ಅವರ ನ್ಯಾಯಾಲಯವು, ಸುರಕ್ಷತೆಯ ಲೋಪದಿಂದ ಮ್ಯಾಗ್ನೋಲಿಯಾಸ್ ಮ್ಯಾನೇಜ್ಮೆಂಟ್ ಮತ್ತು ಸೆಕ್ಯುರಿಟಿ ಏಜೆನ್ಸಿಗೆ ದಂಡ ವಿಧಿಸಲಾಯಿತು. ಈ ಘಟನೆ ಮಗು ಮತ್ತು ಅವಳ ಕುಟುಂಬಕ್ಕೆ ಮಾನಸಿಕ ಸಂಕಟವನ್ನು ಉಂಟುಮಾಡಿತು ಎಂದು ಗ್ರಾಹಕ ವೇದಿಕೆ ತಿಳಿಸಿದೆ.