CrimeLatestMain PostNational

ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್‌ಗೆ ಕಪಾಳಕ್ಕೆ ಬಾರಿಸಿದ ಉದ್ಯಮಿ

ಲಕ್ನೋ: ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್‌ಗೆ ಉದ್ಯಮಿಯೊಬ್ಬ ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಸಿ ಕ್ಲೋಸ್ ನಾರ್ತ್ ಸೊಸೈಟಿಯ ನಿವಾಸಿ ವರುಣ್‍ನಾಥ್(39)ನನ್ನು ಬಂಧಿಸಲಾಗಿದೆ. ಕೆಲ ನಿಮಿಷಗಳ ಕಾಲ ವರುಣ್ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ವರುಣ್ ತನ್ನ ಸೊಸೈಟಿಯ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್ ಬಳಿ ಅನುಚಿತವಾಗಿ ವರ್ತಿಸಿ, ಅವರಿಬ್ಬರನ್ನು ಥಳಿಸಿದ್ದಾನೆ.

ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್‌ಗೆ ಕಪಾಳಕ್ಕೆ ಬಾರಿಸಿದ ಉದ್ಯಮಿ

ಘಟನೆಗೆ ಸಂಬಂಧ ವರುಣ್ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೆಟರ್‌ನನ್ನು ಥಳಿಸುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವೀಡಿಯೋದಲ್ಲಿ ವರುಣ್ ಕೆಟ್ಟ ಭಾಷೆಯಲ್ಲಿ ಬೈಯುತ್ತಾ ಅನೇಕ ಬಾರಿ ಸೆಕ್ಯೂರಿಟಿ ಗಾರ್ಡ್ ಹಾಗೂ ಲಿಫ್ಟ್ ಆಪರೇಟರ್‍ಗೆ ಕಪಾಳ ಮೋಕ್ಷ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕಿರುಚಾಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.

ಘಟನೆ ಸಂಬಂಧಿಸಿ ಭದ್ರತಾ ಸಿಬ್ಬಂದಿ ಜಮಾಯಿಸಿ ಸೊಸೈಟಿಯ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ಸೆಕ್ಯೂರಿಟಿ ಗಾರ್ಡ್ ಅಶೋಕ್ ನೀಡಿರುವ ದೂರಿನ ಪ್ರಕಾರ, 12ನೇ ಮಹಡಿಯಿಂದ ಬರುತ್ತಿದ್ದ ಲಿಫ್ಟ್ ನೆಲಮಹಡಿಯಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಲಿಫ್ಟ್‌ನಲ್ಲಿ ವರುಣ್ ಇದ್ದ. ಲಿಫ್ಟ್‍ನಲ್ಲಿ ಬಂಧಿ ಆಗಿರುವ ಬಗ್ಗೆ ಇಂಟರ್‌ಕಾಮ್ ಮೂಲಕ ಮಾಹಿತಿ ನೀಡಿದ್ದಾನೆ. ಇದಾದ ನಂತರ ಲಿಫ್ಟ್ ನಿರ್ವಾಹಕರನ್ನು ಕರೆಸಲಾಯಿತು. ಲಿಫ್ಟ್‌ನ್ನು ತೆಗೆದುಕೊಳ್ಳಲು ಸುಮಾರು 5 ನಿಮಿಷ ಸಮಯ ತೆಗೆದುಕೊಂಡಿದೆ. ಇದಾದ ಬಳಿಕ ಹೊರೆಗೆ ಬಂದ ವರುಣ್ ಕಪಾಳಕ್ಕೆ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ವರುಣ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

Live Tv

Leave a Reply

Your email address will not be published. Required fields are marked *

Back to top button