DistrictsKarnatakaLatestLeading NewsMain PostRaichur

ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಹರಿದುಬಂದಿದೆ. ಆಗಸ್ಟ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಒಟ್ಟು 2,78,80,586 ರೂಪಾಯಿ ಸಂಗ್ರಹವಾಗಿದೆ.

ಸಂಗ್ರಹವಾದ ಕಾಣಿಕೆಯಲ್ಲಿ 5,89,300 ರೂ.ಗಳಷ್ಟು ನಾಣ್ಯಗಳು ಹಾಗೂ 2,72,91,286 ರೂ.ನಷ್ಟು ನೋಟುಗಳಿವೆ. 65 ಗ್ರಾಂ. ಬಂಗಾರ, 1.15 ಕೆ.ಜಿ ಬೆಳ್ಳಿಯಿದೆ. ಜುಲೈ ತಿಂಗಳಲ್ಲಿ ಒಟ್ಟು 1,97,21,825 ರೂ. ಸಂಗ್ರಹವಾಗಿತ್ತು, ಜೂನ್‌ನಲ್ಲಿ 2,52,33,205 ರೂಪಾಯಿ ಹಾಗೂ ಮೇ ತಿಂಗಳಲ್ಲಿ 2,27,42,499 ರೂಪಾಯಿ ಸಂಗ್ರಹವಾಗಿತ್ತು. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ

ಈ ಬಾರಿ ಭಕ್ತರೊಬ್ಬರು 10 ರೂ. ನೋಟುಗಳಿಂದ ಮಾಡಿದ ಮಾಲೆಯನ್ನು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ವಿಶೇಷ ಕಾಣಿಕೆ ಎನಿಸಿದೆ ಎಂದು ಹುಂಡಿ ಎಣಿಕೆ ಕಾರ್ಯ ಮುಕ್ತಾಯದ ನಂತರ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Live Tv

Leave a Reply

Your email address will not be published.

Back to top button