ರಾಯಚೂರು: ಶ್ರೀ ಗುರುರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಈಗ ಗುರುರಾಯರ 347ನೇ ಆರಾಧನ ಮಹೋತ್ಸವ ಸಂಭ್ರಮ ಮನೆ ಮಾಡಿದೆ.
ಸಪ್ತರಾತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಮಠ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ ತುಂಗಭದ್ರಾ ತುಂಬಿ ಹರಿಯುತ್ತಿದ್ದು ದೇಶದ ಮೂಲೆ ಮೂಲೆಯ ಭಕ್ತರನ್ನು ಮಂತ್ರಾಲಯ ಕೈ ಬೀಸಿ ಕರೆಯುತ್ತಿದೆ.
ಕಲಿಯುಗ ಕಾಮಧೇನು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಇಂದಿನಿಂದ 31ರ ವರೆಗೆ ಏಳು ದಿನ ಕಾಲ ನಡೆಯಲಿದೆ. ಸಪ್ತರಾತ್ರೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದು ಈ ಬಾರಿಯ ವಿಶೇಷ. ಪ್ರತಿ ವರ್ಷ ಪುಣ್ಯ ಸ್ನಾನಕ್ಕೆ ಪರದಾಡುತ್ತಿದ್ದ ಭಕ್ತರಿಗೆ ಈ ಬಾರಿ ನೀರಿನ ಸಮಸ್ಯೆ ದೂರವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಡಂಬರದಿಂದ ಉತ್ಸವ ಆಚರಿಸಲು ಮಠ ಸಿದ್ಧತೆಗಳನ್ನು ಮಾಡಿಕೊಂಡಿದೆ. ಉದ್ಯಮಿ ಎಚ್.ಜಿ ರಂಗನಗೌಡ ಎಂಬವರು ಸುಮಾರು 200 ಕೆ.ಜಿ ಬೆಳ್ಳಿಯಿಂದ ಮಠದ ಮಹಾದ್ವಾರಕ್ಕೆ ಕವಚ ತೊಡಿಸಿದ್ದಾರೆ. ಮಠದ ವಸತಿ ಗೃಹ, ಆಸ್ಪತ್ರೆ ನವೀಕರಣಗೊಂಡಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv