ನವದೆಹಲಿ: ಕೇವಲ 11 ವರ್ಷದಲ್ಲಿ ಶೂನ್ಯದಿಂದ 5 ಕೋಟಿ ರೂ. ಸಂಪತ್ತು ಗಳಿಸುವ ಮೂಲಕ ದೆಹಲಿಯ (Delhi) ಗುರುಗ್ರಾಮದ ಟೆಕ್ಕಿಯೊಬ್ಬರು ಸುದ್ದಿಯಲ್ಲಿದ್ದಾರೆ.
ಆಕ್ಸೆಂಚರ್ (Accenture) ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗುರ್ಜೋತ್ ಅಹ್ಲುವಾಲಿಯಾ ತಮ್ಮ ಮೈಲಿಗಲ್ಲನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅವರು 2024 ಹಣಕಾಸು ವರ್ಷದ ಅತಿದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.
Advertisement
Two things which helped:
1. No debt (education covered by parents)
2. No rent (living with parents)
PS: Recent correction has reduced net worth by 8-10%, but I can’t wait for the next bull market to fulfill all my materialistic aspirations!
— Gurjot Ahluwalia (@gurjota) February 2, 2025
ಹಣಕಾಸು ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಅವರು ಪೋಸ್ಟ್ ಮಾಡಿದ್ದಾರೆ. ಅಹ್ಲುವಾಲಿಯಾ ಅವರು 2.7 ಲಕ್ಷ ರೂ. ಸಾಲ ಇದ್ದರೆ ಇದ್ದರೆ 5 ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
Advertisement
ವೃತ್ತಿಜೀವನದ ಪ್ರಗತಿ, ಶಿಸ್ತುಬದ್ಧ ಉಳಿತಾಯ ಮತ್ತು ಇಕ್ವಿಟಿ ಹೂಡಿಕೆಗಳೇ ಈ ಹಣಕಾಸು ಸಾಧನೆಗೆ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ
Advertisement
ಈ ಪೋಸ್ಟ್ ಮಾಡಿದ ನಂತರ ಹಲವು ಮಂದಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅವರು, ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ. ನನ್ನ ಶಿಕ್ಷಣಕ್ಕೆ ಪೋಷಕರು ಹಣ ನೀಡಿದ್ದರಿಂದ ಯಾವುದೇ ಸಾಲ ಇಲ್ಲ. ನಾನು ಪೋಷಕರ ಜೊತೆ ವಾಸಿಸುತ್ತಿರುವುದರಿಂದ ಬಾಡಿಗೆ ಪಾವತಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement
No real estate, jewellery, etc.
Primarily equity, MF, bonds, NPS, EPF, savings, etc.
— Gurjot Ahluwalia (@gurjota) February 2, 2025
ನಾನು ಯಾವುದೇ ರಿಯಲ್ ಎಸ್ಟೇಟ್, ಆಭರಣ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿಲ್ಲ. ಮುಖ್ಯವಾಗಿ ಷೇರುಗಳು, ಮ್ಯೂಚುವಲ್ ಫಂಡ್, ಬಾಂಡ್‌ಗಳು, NPS, EPF, ಉಳಿತಾಯದಲ್ಲಿ ಹೂಡಿಕೆ ಮಾಡಿದ್ದೇನೆ ಎಂದಿದ್ದಾರೆ.
ಇತ್ತೀಚಿಗೆ ಷೇರು ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತಿರುವುದರಿಂದ ನಿವ್ವಳ ಮೌಲ್ಯದಲ್ಲಿ 8-10% ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಹ್ಲುವಾಲಿಯಾ ಅವರು ಷೇರು ಹೂಡಿಕೆಯ ಬಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ. ನಾನು ಈಕ್ವಿಟಿ, ವೈಯಕ್ತಿಕ ಹಣಕಾಸು, ಹಣದ ಹ್ಯಾಕ್‌ಗಳು ಮತ್ತು ನನ್ನ ಹವ್ಯಾಸಗಳ ಬಗ್ಗೆ ಬರೆಯುತ್ತೇನೆ ಎಂದು ತಿಳಿಸಿದ್ದಾರೆ.