ಬೆಂಗಳೂರು: ಲೋಕಸಭೆ ಚುನಾವಣೆ (Loksabha Election) ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್ನ್ಯೂಸ್ ಒಂದು ಸಿಕ್ಕಿದೆ.
ರಾಜ್ಯದಲ್ಲಿ ಅನ್ನಭಾಗ್ಯ (Anna Bhagya) ಹಾಗೂ ಗೃಹಲಕ್ಷ್ಮಿ (Gruhalakshmi) ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ.
Advertisement
Advertisement
ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್
Advertisement
Advertisement
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ.