ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌

Public TV
1 Min Read
Meenaakshi Chaudhary

ಟಾಲಿವುಡ್‌ನಲ್ಲಿ ಶ್ರೀಲೀಲಾ (Sreeleela) ಹವಾ ಕಮ್ಮಿಯಾದಂತಿದೆ. ರಶ್ಮಿಕಾಗೆ (Rashmika Mandanna) ಠಕ್ಕರ್ ಕೊಟ್ಟಿದ್ದ ಶ್ರೀಲೀಲಾಗೆ ಪೈಪೋಟಿ ಕೊಟ್ಟಿದ್ದಾರೆ ಮೀನಾಕ್ಷಿ ಚೌಧರಿ. ‘ಗುಂಟೂರು ಖಾರಂ’ ಸಿನಿಮಾ ನಂತರ ಮೀನಾಕ್ಷಿಗೆ (Meenakshi Chaudhary) ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ. ಶ್ರೀಲೀಲಾರನ್ನೇ ಮೀರಿ ಬೆಳೆಯುವ ಸೂಚನೆ ಸಿಕ್ತಿದೆ. ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಬಿಗ್‌ ಚಾನ್ಸ್‌ ಸಿಕ್ಕಿದೆ.

Meenakshi Chaudhary 2

ಇತ್ತೀಚೆಗೆ ಶ್ರೀಲೀಲಾ ನಟಿಸಿದ 4-5 ಸಿನಿಮಾಗಳು ಮಕಾಡೆ ಮಲಗಿದ್ದವು. ಗುಂಟೂರು ಖಾರಂ ಚಿತ್ರದಲ್ಲಿ ಮಹೇಶ್ ಬಾಬುಗೆ (Mahesh Babu) ಶ್ರೀಲೀಲಾ ಫಸ್ಟ್ ಹೀರೋಯಿನ್ ಆಗಿದ್ರೆ, ಮೀನಾಕ್ಷಿ ಸೆಕೆಂಡ್ ಲೀಡ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ನಂತರ ಲೀಲಾ ಲಕ್ ಬದಲಾಗುತ್ತೆ ಎಂದುಕೊಂಡವರ ಲೆಕ್ಕಾಚಾರ ಉಲ್ಟಾ ಆಗಿದೆ. ಶ್ರೀಲೀಲಾ ಬದಲು ಮೀನಾಕ್ಷಿಗೆ ಬೇಡಿಕೆ ಜಾಸ್ತಿಯಾಗಿದೆ.

meenakshi

2021ರಲ್ಲಿ ತೆಲುಗಿನ ಕಿಲಾಡಿ, ಹಿಟ್ ಸಿನಿಮಾಗಳಲ್ಲಿ ನಟಿಸಿದ ಮೀನಾಕ್ಷಿ ಮಹೇಶ್ ಬಾಬು ಜೊತೆ ನಟಿಸಿದ ಮೇಲೆ ಸ್ಟಾರ್ ನಟರಿಗೆ ನಾಯಕಿಯಗಿದ್ದಾರೆ. ದಳಪತಿ ವಿಜಯ್ (Vijay Thalapathy) ನಟನೆಯ 68ನೇ ಚಿತ್ರಕ್ಕೆ ಮೀನಾಕ್ಷಿ ಹೀರೋಯಿನ್ ಆಗಿದ್ದಾರೆ. ವಿಶ್ವಕ್ ಸೇನ್, ವರುಣ್ ತೇಜ್, ದುಲ್ಕರ್ ಸಲ್ಮಾನ್ ಜೊತೆ ನಟಿಸುವ ಆಫರ್ ಸಿಕ್ಕಿದೆ. ಇದನ್ನೂ ಓದಿ:ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾದಲ್ಲಿ ಒರಟ ಪ್ರಶಾಂತ್

ಅದಷ್ಟೇ ಅಲ್ಲ, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಮೀನಾಕ್ಷಿಗೆ ಉತ್ತಮ ಪಾತ್ರ ಸಿಕ್ಕಿದೆಯಂತೆ. ತೆಲುಗಿನಲ್ಲಿ ಬೇಡಿಕೆಯಿದ್ದ ಶ್ರೀಲೀಲಾ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದರು. ಈಗ ಆ ಸ್ಥಾನಕ್ಕೆ ಮೀನಾಕ್ಷಿ ಬಂದಿದ್ದಾರೆ. ನಿರ್ಮಾಪಕರು ಕೂಡ ಮೀನಾಕ್ಷಿಗೆ ಮಣೆ ಹಾಕ್ತಿದ್ದಾರೆ. ಓಡೋ ಕುದುರೆಗೆ ಗಾಳ ಹಾಕೋಕೆ ಟಾಲಿವುಡ್ ರೆಡಿಯಾಗಿದೆ.

Share This Article