ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ರೂಪುಗೊಂಡಿರುವ ಚಿತ್ರ ‘ಗನ್ಸ್ ಅಂಡ್ ರೋಸಸ್’. ಹೆಚ್‌ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶನದ ಈ ಚಿತ್ರ, ಟೀಸರ್ ಮೂಲಕ ಒಂದಷ್ಟು ಕುತೂಹಲ ಮೂಡಿಸಿತ್ತು. ಭೂಗತ ಜಗತ್ತು, ಅದರೊಂದಿಗೆ ಹೊಸೆದುಕೊಂಡ ಡ್ರಗ್ಸ್ ಮಾಫಿಯಾ ಹಾಗೂ ನವಿರು ಪ್ರೇಮದ ಕಥಾನಕವನ್ನು ಈ ಸಿನಿಮಾ ಒಳಗೊಂಡಿದೆ. ಹೊಸ ಆವೇಗದ ತಂಡವೊಂದರ ಸಾಥ್ ಹಾಗೂ ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರ ಮೂಲಕ ‘ಗನ್ಸ್ ಅಂಡ್ ರೋಸಸ್’ (Guns And Roses) ಸಿನಿಮಾ ರೂಪ ಧರಿಸಿದೆ. ಜನವರಿ 3ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.
Advertisement
ವಿಶೇಷವೆಂದರೆ, ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಚ್.ಆರ್ ನಟರಾಜ್ ಎಂಬ ಅಪ್ಪಟ ಸಿನಿಮಾ ವ್ಯಾಮೋಹಿ ನಿರ್ಮಾಪಕರ ಆಗಮನವಾಗಿದೆ. ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಹೆಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟರಾಜ್ ಅವರು ಲ್ಯಾಂಡ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಾ, ರಾಜಕೀಯ ರಂಗದಲ್ಲಿಯೂ ಸಕ್ರಿಯರಾಗಿರುವವರು. 2015ರಲ್ಲಿ ತುಮಕೂರು ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಣಕ್ಕಿಳಿದಿದ್ದರು. ಹೀಗೆ ತಮ್ಮ ವ್ಯವಹಾರ, ರಾಜಕೀಯ ಚಟುವಟಿಕೆಗಳ ನಡುವಲ್ಲಿಯೇ ಅಪಾರವಾದ ಸಿನಿಮಾಸಕ್ತಿ ಹೊಂದಿರುವವರು ಹೆಚ್.ಆರ್ ನಟರಾಜ್. ಈ ಕಾರಣದಿಂದಲೇ ಆರಂಭದಿಂದಲೂ ಸಾಕಷ್ಟು ಸಿನಿಮಾ ಮಂದಿಯೊಂದಿಗೆ ನಂಟು ಹೊಂದಿದ್ದಾರೆ. ಅದರ ಫಲವಾಗಿಯೇ ಈಗ್ಗೆ ಇಪ್ಪತೈದು ವರ್ಷಗಳಿಂದಲೂ ಈ ಸಿನಿಮಾ ನಿರ್ದೇಶಕರಾದ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಟರಾಜ್ ಅವರಿಗೆ ಪರಿಚಿತರಾಗಿದ್ದರು. ಆ ಪರಿಚಯವೇ ‘ಗನ್ಸ್ ಅಂಡ್ ರೋಸಸ್’ ಚಿತ್ರ ಜೀವತಳೆಯಲು ಕಾರಣವಾಗಿದೆ. ಇದನ್ನೂ ಓದಿ:ಅಲ್ಲು ಅರ್ಜುನ್ ದುಡ್ಡಿನ ಮದದಿಂದ ಸುಳ್ಳು ಹೇಳ್ತಿದ್ದಾರೆ: ಎಸಿಪಿ ವಾರ್ನಿಂಗ್
Advertisement
Advertisement
ಹೆಸರಾಂತ ಕಥೆಗಾರ, ನಿರ್ಮಾಪಕ, ನಟ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಲು ಈ ಹಿಂದೆಯೇ ಭೂಮಿಕೆ ಸಿದ್ಧವಾಗಿತ್ತು. ಚಿತ್ರರಂಗದಲ್ಲಿ ಇಪ್ಪತೈದು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶಕನಾಗಿ ಬಡ್ತಿ ಪಡೆಯುವ ತಯಾರಿಯಲ್ಲಿದ್ದರು. ಅಜಯ್ ಕುಮಾರ್ ಗರಡಿಯಲ್ಲಿ ಪಳಗಿಕೊಂಡಿದ್ದ ಯುವಕ ಶರತ್ ಸಿದ್ಧಗೊಳಿಸಿದ್ದ ಕಥೆ ಹೆಚ್.ಆರ್ ನಟರಾಜ್ ಅವರಿಗೆ ಹಿಡಿಸಿತ್ತು. ಈ ಸಿನಿಮಾ ಶುರು ಮಾಡುವ ಮುನ್ನ ಗುರುಗಳನ್ನು ಸಂಪರ್ಕಿಸಿದಾಗ ಅವರಿಂದಲೂ ಆಶೀರ್ವಾದದ ಹಸಿರು ನಿಶಾನೆ ಕಂಡಿತ್ತು. ಇದೇ ಹುರುಪಿನಲ್ಲಿ ಅವರು ಈ ಚಿತ್ರವನ್ನು ಯಾವುದಕ್ಕೂ ಕೊರತೆಯಾಗದಂತೆ ನಿರ್ಮಾಣ ಮಾಡಿರುವ ಧನ್ಯತಾ ಭಾವ ಹೊಂದಿದ್ದಾರೆ.
Advertisement
ಸಿನಿಮಾ ನಂಟು ಹೆಚ್.ಆರ್ ನಟರಾಜ್ ಅವರ ಪಾಲಿಗೆ ಹೊಸತೇನಲ್ಲ. ಆದರೆ, ‘ಗನ್ಸ್ ಅಂಡ್ ರೋಸಸ್’ ಚಿತ್ರದ ಮೂಲಕ ಅವರು ಅಧಿಕೃತವಾಗಿ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಒಂದಷ್ಟು ಚೆಂದದ ಸಿನಿಮಾಗಳನ್ನು ನಿರ್ಮಾಣ ಮಾಡಿ, ನೈಜ ಪ್ರತಿಭೆಗಳಿಗೆ ಉತ್ತೇಜನ ನೀಡುವ ಅಭಿಲಾಶೆಯನ್ನೂ ಹೊಂದಿದ್ದಾರೆ. ಯಾವ ಪಾತ್ರಕ್ಕಾದರೂ ಸೈ ಎಂಬಂಥ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ (Yashvika Nishkala) ಅರ್ಜುನ್‌ಗೆ (Arjun) ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ‘ಗನ್ಸ್ ಅಂಡ್ ರೋಸಸ್’ ಜನವರಿ 3ರಂದು ತೆರೆಗಾಣಲಿದೆ.