– ಚಿತ್ರದುರ್ಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಮತಾಂತರ
ಬೆಂಗಳೂರು: ಮತಾಂತರವಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರದುರ್ಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಮತಾಂತರ ಆಗಿದ್ದಾರೆ. ನನ್ನ ಹೆತ್ತ ತಾಯಿಯನ್ನು ಮತಾಂತರ ಮಾಡಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಕಲಾಪದ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.
ನನ್ನ ತಾಯಿಯನ್ನು ಮತಾಂತರ ಮಾಡಿದ್ದಾರೆ. ಚರ್ಚ್‍ಗಳಲ್ಲಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ನನ್ನ ತಾಯಿಗೂ ಬ್ರೈನ್ ವಾಶ್ ಮಾಡಿದ್ದಾರೆ, ನನ್ನ ತಾಯಿ ಕ್ರಿಶ್ಚಿಯನ್ ರಿಂಗ್ ಟೋನ್ ಹಾಕಿಕೊಳ್ತಾರೆ. ಕ್ರಿಶ್ಚಿಯನ್ ಫೋಟೋ ಹಾಕಿಕೊಳ್ತಾರೆ. ಕೇಳಿದರೆ ಸೂಸೈಡ್ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಾರೆ. ದಲಿತರು, ಹಿಂದುಳಿದ ವರ್ಗದವರನ್ನ ಜಾಸ್ತಿ ಮತಾಂತರ ಮಾಡುತ್ತಿದ್ದಾರೆ. ಬೆದರಿಸುತ್ತಾರೆ, ಮತಾಂತರ ವಿರೋಧಿಸಿದ್ರೆ ಜಾತಿ ನಿಂದನೆ ಕೇಸ್ ಹಾಕ್ತಾರೆ ಏನ್ ಮಾಡೋದು? ಇದೊಂದು ದೊಡ್ಡ ಪಿಡುಗು, ಇದಕ್ಕೆ ಕಡಿವಾಣ ಹಾಕಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಜೂಜಾಟದ ಬಿಗಿ ಕ್ರಮಕ್ಕೆ, ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ: ಬೊಮ್ಮಾಯಿ
ಈ ವೇಳೆ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಹೌದು, ಎಲ್ಲ ಕಡೆ ಮತಾಂತರ ಜಾಸ್ತಿ ಆಗುತ್ತಿದೆ. ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿ ಕಾನೂನು ತರಬೇಕಿದೆ. ಕಡಿವಾಣ ಹಾಕಬೇಕು ಎಂದರೆ ಕಾಯ್ದೆ ತನ್ನಿ ಎಂದು ಆಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ
ಮತಾಂತರದ ಸಮಸ್ಯೆಯನ್ನು ಆಲಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರದ ಗಮನದಲ್ಲಿ ಇದೆ. ಇದೊಂದು ಅಪರಾಧವಾಗಿದೆ. ಅಮಿಷಒಡ್ಡಿ ಮತಾಂತರ ಮಾಡುವುದು ಅಪರಾಧ. ಶಾಂತಿ ಭಂಗವುಂಟು ಮಾಡುವ ಆತಂಕ ಇದೆ. ರಾಜ್ಯ ಸರ್ಕಾರ ಮುಂದೆ ಏನ್ ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ.