Bengaluru City

ಜೂಜಾಟದ ಬಿಗಿ ಕ್ರಮಕ್ಕೆ, ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ: ಬೊಮ್ಮಾಯಿ

Published

on

Share this

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಜೂಜಾಟದ ಬಿಗಿ ಕ್ರಮ ಅವಶ್ಯಕತೆ ಇದೆ ಎಂದು ಚರ್ಚೆ ಮಾಡಲಾಗಿದೆ. ಜೂಜಾಟದ ಬಿಗಿ ಕ್ರಮಕ್ಕೆ, ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ತರುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜೂಜಾಟದ ಬಗ್ಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರಸ್ತಾಪ ಮಾಡಿದ್ದಾರೆ. ಜೂಜಾಟ ಸಾಮಾಜಿಕ ಪಿಡುಗಾಗಿದೆ. ಕರ್ನಾಟಕವನ್ನು ಗ್ಯಾಂಬ್ಲಿಂಗ್ ಮುಕ್ತ ರಾಜ್ಯವನ್ನಾಗಿ ಮಾಡಬೇಕಿದೆ. ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ತರುವ ಕಾಯ್ದೆ ತರುತ್ತಿದ್ದೇವೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಇದನ್ನೂ ಓದಿ:  ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

ನಮ್ಮ ಕಡೆ ಜೂಜಾಟ ಹೆಚ್ಚಾಗಿ ನಡೆಯುತ್ತಿದೆ, ಏಜೆಂಟ್‍ಗಳನ್ನು ಇಟ್ಕೊಂಡು ಜೂಜಾಟ ಆಡುತ್ತಿದ್ದಾರೆ. ಇದರಿಂದ ರೌಡಿಸಂ ಬೆಳೆಯುತ್ತಿದೆ ಎಂದು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಅವರು ಸಮ್ಯೆಯ ಕುರಿತಾಗಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಜೂಜಾಟದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಶಾಸಕರು ಪೊಲೀಸರಿಗೆ ಹೇಳಿದರೆ ಸಾಕು ಬಿಗಿಯಾಗುತ್ತದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:  MSc ಓದಿ ಕಸ ಗುಡಿಸುತ್ತಿದ್ದ ಮಹಿಳೆಗೆ ಸರ್ಕಾರಿ ಕೆಲಸ ಕೊಟ್ಟ ಸಚಿವರು

ಪೊಲೀಸರು ಬಿಗಿ ತೆಗೆದುಕೊಂಡು ಬಂಧಿಸಿದರು ಬೇಲ್ ಮೇಲೆ ಹೊರಗೆ ಬರುತ್ತಾರೆ. ಈ ಜೂಜಾಟದ ಬಗ್ಗೆ ಬಿಗಿ ಕ್ರಮ ಅವಶ್ಯಕತೆ ಇದೆ. ಹಾಗಾಗಿಯೇ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ. ಕಾಯ್ದೆ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿ ಸಲಹೆ ನೀಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement