ರಾಯಚೂರ: ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಎಡವಟ್ಟುಗಳು ಪ್ರಾರಂಭವಾಗಿತ್ತವೆ. ಈ ಬಾರಿಯ ಪರೀಕ್ಷೆಗಳು ಅಷ್ಟೇ ತನ್ನ ಎಡವಟ್ಟುಗಳ ಸರಣಿಯನ್ನು ಮುಂದುವರೆಸಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನ ಸರಿಯಾದ ಸಮಯಕ್ಕೆ ತಲುಪಿಸದೇ ಮತ್ತೊಂದು ಎಡವಟ್ಟು ಮಾಡಿದೆ. ಎಂಕಾಂ ಎರಡನೇ ಸೆಮಿಸ್ಟರ್ ನ ಪಬ್ಲಿಕ್ ರಿಲೇಶನ್ ವಿಷಯ ಪರೀಕ್ಷೆ ಯನ್ನ ಕೊನೆಗೂ ಪ್ರಶ್ನೆ ಪತ್ರಿಕೆ ತಲುಪಿಸಲಾಗದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ಮುಂದೂಡಲಾಗಿದೆ.
Advertisement
ಇನ್ನೂ ರಾಜಶಾಸ್ತ್ರ ವಿಭಾಗದ ಇಂಡಿಯನ್ ಎಕಾನಮಿ ಓಪನ್ ಎಲೆಕ್ಟಿವ್ ವಿಷಯ ಪರೀಕ್ಷೆಯನ್ನೂ ಕೂಡ 45 ನಿಮಿಷ ತಡವಾಗಿ ಆರಂಭಿಸಲಾಯಿತು. ಇ- ಮೇಲ್ ಮೂಲಕ ಬಂದ ಪ್ರಶ್ನೆ ಪತ್ರಿಕೆಗಳನ್ನ ವಿದ್ಯಾರ್ಥಿಗಳಿಗೆ ನೀಡಿ ಪರೀಕ್ಷೆ ಬರೆಯಿಸಲಾಗಿದೆ.